ನೀ ತಂದೆ ನಾ ಬಂದೆ

ನೀ ತಂದೆ ನಾ ಬಂದೆ

(ರಾಗ ಕಮಾಚ್ ಛಾಪು ತಾಳ ) ನೀ ತಂದೆ ನಾ ಬಂದೆ ನೀ ಎನ್ನ ತಂದೆ ||ಪ|| ಮನ್ಮನದಾಧೀನ ಪೇಳೆನ್ನ ತಂದೆ ||ಅ|| ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ನೀ ತಂದೆ || ಕಾಮದಲಿ ಎನ ತಂದೆ ಕ್ರೋಧದಲಿ ಎನ ತಂದೆ ಉನ್ಮದಾಭರಣಗಳಲೆನ್ನ ತಂದೆ || ಹಿಂದೆ ಬರೆದಾ ಬರೆಹ ಹೇಗಾದರಾಗಲಿ ಮುಂದೆ ಚಂದಾಗಿ ಬರೆಯಯ್ಯ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು