ಮಾ ಮಝ ಬಾಪುರೇ

ಮಾ ಮಝ ಬಾಪುರೇ

(ರಾಗ ಮೋಹನ ಅಟತಾಳ ) ಮಾ ಮಝ ಬಾಪುರೇ ಭಳಿರೆ ಹನುಮಂತ ||ಪ || ರಾಮಪದ ಸೇವಿಪ ವೀರ ಹನುಮಂತ ||ಅ || ಹುಟ್ಟುದಲೆ ಹೊನ್ನ ಕಚ್ಚುಟವ ಕುಂಡಲವೆರಸಿ ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ದಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ ಪಟ್ಟಕನುವಾದ ಸಿರಿವಂತ ಹನುಮಂತ || ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ ಕುಂಭಿನಿಯ ಮಗಳಿಗುಂಗುರವನಿತ್ತೆ ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ ಗಂಭೀರ ವೀರಾಧಿವೀರ ಹನುಮಂತ || ಅತಿ ದುರುಳ ರಕ್ಕಸನು ರಥದ ಮೇಲಿರಲು ರಘು- ಪತಿಯು ಪದಚರಿಯಾಗಿ ನಿಂತಿರಲು ನೋಡಿ ಪ್ರಿಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ ಅತಿ ಭಯಂಕರ ಸತ್ವವಂತ ಹನುಮಂತ || ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು ದೃಢ ಭಕುತಿಯಿಂದ ಮೌನದಲಿ ಕುಳಿತು ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಂಗೆ ಕೊಡುತ ಸವಿದುಂಡ ಗುಣವಂತ ಹನುಮಂತ || ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ ತೃತೀಯದಲಿ ಗುರು ಮಧ್ವ ಮುನಿಯು ಎನಿಸಿ ಪ್ರತಿಯಿಲ್ಲದಲೆ ಮೆರೆದ ಪುರಂದರವಿಠಲನ ಭಕ್ತ ನಿನಗಾರು ಸರಿ ವಿಜಯ ಹನುಮಂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು