ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ

(ರಾಗ ಸೌರಾಷ್ಟ್ರ ಆದಿ ತಾಳ ) ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ || ಅಕ್ರೂರಗೊಲಿದ ತ್ರಿವಿಕ್ರಮಗೆ ನಕ್ರನ ಗೆಲಿದ ಪರಾಕ್ರಮಿಗೆ ಶಕ್ರನ ಗರ್ವಪಹಾರವ ಮಾಡಿದ ಶುಕ್ರನ ಶಿಷ್ಯನ ಗೆಲಿದವಗೆ || ಗಂಗೆಯ ಪಡೆದ ಶ್ರೀರಂಗನಿಗೆ ರಂಗುಮಾಣಿಕದುಂಗುರದವಗೆ ಭೃಂಗಕುಂತಳೆಯರ ವ್ರತವನೆ ಕೆಡಿಸಿದ ಅಂಗಜನಯ್ಯ ಶುಭಾಂಗನಿಗೆ || ಧರೆಯೊಳಧಿಕ ವೆಂಕಟಾಚಲಗೆ ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ ಪರತತ್ವ ಶ್ರೀಪುರಂದರವಿಠಲಗೆ ವರವೆಂಕಟೇಶ ಶ್ರೀನಿವಾಸಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು