ಮಾನಭಂಗವ ಮಾಡಿ ಮತ್ತೆ ಉಪಚಾರ

ಮಾನಭಂಗವ ಮಾಡಿ ಮತ್ತೆ ಉಪಚಾರ

(ರಾಗ ಕಾಂಭೋಜ ಝಂಪೆ ತಾಳ ) ಮಾನಭಂಗವ ಮಾಡಿ ಮತ್ತೆ ಉಪಚಾರಗಳ- ನೇನ ಮಾಡಿದರಲ್ಲಿ ಇರಬಾರದಯ್ಯ ||ಪ|| ಕುಂದುಗಳನೆತ್ತಿ ಕುಚೋದ್ಯ ಕುಮಂತ್ರಗಳ- ನೊಂದೊಂದು ವರ್ಣಗಳನೆತ್ತಿ ಜರೆದು ಮುಂದೆ ಭಂಗಿಸಿ ಹಿಂದೆ ಉಂಬಳಿಯ ನೀಡುವುದು ಮುಂದಲೆಯ್ ಕೊಯ್ದು ಮುಡಿಗ್ಹುವ್ವು ಮುಡಿಸಿದಂತೆ || ನಗೆಗೇಡು ಮಾಡಿ ನಾಲ್ವರ ಮುಂದೆ ಮೊಗಗೆಡಿಸಿ ಮಗುಳೆ ಬಾರೆಂದು ಮನ್ನಿಸಿ ಲಾಲಿಸಿ ಮಿಗಿಲಾದ ವಸ್ತ್ರಗಳ ಭೂಷಣಂಗಳನೀಯೇ ತೊಗಲ ಮೂಗ್ಹರಿದು ಚಿನ್ನದ ಮೂಗನಿತ್ತಂತೆ || ಅರ್ಥ ಹೋದರೆ ಪ್ರಾಣ, ಪ್ರಾಣ ಹೋದರೆ ಮಾನ ವ್ಯರ್ಥವಾಗದ ಹಾಗೆ ಕಾಯಬೇಕು ಕರ್ತ ಪುರಂದರವಿಠಲರಾಯನ ಚಿತ್ತದಲಿ ನೆನೆನೆನೆದು ಸುಖಿಯಾಗಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು