ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರು ಆಡಿದ ಶಬ್ದ ಆಲಿಸಿ ಐದೆತನ ಪಡೆದಳು ಊರ್ವಿಯೊಳಗೀಪರಿ ಸತಿಯರ ಸ್ವಧರ್ಮ ನಿಬಿಡವಾಗಿದೆ ನಿನ್ನ ದಯದಿ ಅಬ್ಜನಾಭನೆ ಇವನ ಮೇಲೆ ದಯಮಾಡು ಕರುಣಾಬ್ಧಿಯೆ ಉಪೇಕ್ಷೆ ಮಾಡದೆಲೆ ಅಬ್ಬರ ದೈವವೆ ಸಿರಿ ವಿಜಯವಿಠಲರೇಯ ಲಬ್ಧವಾಗಲಿ ಬೇಡಿದ ಅಭಯವೂ |
ದಾಸ ಸಾಹಿತ್ಯ ಪ್ರಕಾರ
ಬರೆದವರು