ರಕ್ಷಿಸು ಲೋಕನಾಯಕನೆ

ರಕ್ಷಿಸು ಲೋಕನಾಯಕನೆ

( ರಾಗ ಶಂಕರಾಭರಣ ಅಟ ತಾಳ) ರಕ್ಷಿಸು ಲೋಕನಾಯಕನೆ, ನೀ ರಕ್ಷಿಸು ||ಪ|| ಎಷ್ಟೆಷ್ಟು ಜನ್ಮವ ಕಳೆದೆನೊ ಇ- ನ್ನೆಷ್ಟೆಷ್ಟು ಜನ್ಮವ ಕಳೆವೆನೊ ಕಷ್ಟವ ಪಡಲಾರೆ ಕೃಷ್ಣ ಕೃಪೆಯಿಟ್ಟು ಇಷ್ಟವ ಪಾಲಿಸೊ ಇಭರಾಜವರದನೆ || ಬಾಲತನದಿ ಬಹು ಬೆಂದೆನೊ, ನಾನಾ ಲೀಲೆಯಿಂದಲಿ ಕಾಲ ಕಳೆದೆನೊ ಲೋಲ ಲೋಚನ ಎನ್ನ ಮೊರೆ ಕೇಳುತ ಬೇಗ ಜಾಲವ ಮಾಡದೆ ಪಾಲಿಸೊ ನರಹರಿ || ಮುದುಕನಾಗಿ ಚಿಂತೆ ಪಡುವೆನು, ನಾ ಕದಡು ದುಃಖ ಪಡಲಾರೆನೊ ಉದಧಿಶಯನ ಶ್ರೀ ಪುರಂದರವಿಠಲ ಮುದದಿಂದ ರಕ್ಷಿಸೊ ಖಗರಾಜಗಮನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು