ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ

ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ

(ರಾಗ ಕಾಂಭೋಜ ಆದಿ ತಾಳ ) ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ ಎಚ್ಚತ್ತಿರೆಚ್ಚತ್ತಿರೆಲೋ ರಾಮುಗ ||ಪ|| ಒಂಭತ್ತು ಬಾಗಿಲ ಪಂಜರವನಯ್ದಿದೆ ಕಂಭವಿಲ್ಲ ಕದವು ಮೊದಲೆ ಇಲ್ಲ ಎಂಭತ್ತು ಸಾವಿರ ಸಂದು ಗಂಟಿನ ಗೂಡ ನಂಬಿ ನೀ ಕೆಡದಿರೊ ಎಲೊ ರಾಮುಗ || ಮುನಿವರು ಐವರು ಮೋಹಿಸುವರಾರು ಮಂದಿ ಮನ ಕಾಕುಗೊಳಿಸುವರೆಂಟು ಮಂದಿ ಇನಿತು ತಿಳಿದು ಹಿಂದು ಮುಂದು ವಿಚಾರಿಸಿ ಮನಮೆಚ್ಚಿ ಕೆಡದಿರೊ ಎಲೊ ರಾಮುಗ || ಸತಿ ಸುತರಿಗೆ ಮತ್ತೆ ಹಿತರಿಗೆ ಬೇಕೆಂಬ ಅತಿ ಲೋಭತನ ಬೇಡವೆಲೊ ರಾಮುಗ ಕ್ಷಿತಿಸುರರೆಂಬ ಭೂಮಿಲಿ ಬಿತ್ತಿ ಮುಂದಣ ಪಥಕೆ ಸಾಧನ ಮಾಡಿಕೊ ರಾಮುಗ || ಹೊನ್ನು ಹೆಣ್ಣು ಮಣ್ಣು ಎಂಬ ಮೋಹದೊಳಿದ್ದು ಬಣ್ಣಗೆಡಲು ಬೇಡ ಎಲೊ ರಾಮುಗ ಸುಣ್ಣವ ಸುಡುವಂತೆ ಸುಡುತಿದೆ ಬೆಕ್ಕು ನಿನ್ನ ಕಣ್ಣು ತೆರೆದೆಚ್ಚತ್ತಿರೆಲೊ ರಾಮುಗ || ಸ್ಥಿರವೆಂದು ನೆಚ್ಚದಿರು ಈ ಪಂಜರವನು ನೀ ಉರವಣಿಸುತ ಬೆಕ್ಕು ಮೆರೆಯುತಿದೆ ಪರಮಕೃಪಾಳು ಶ್ರೀ ಪುರಂದರವಿಟ್ಠಲನ ನೆರೆ ನಂಬಿ ಸುಖಿಯಾಗಿರೆಲೊ ರಾಮುಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು