ಕಂಡೆ ನಾ ಉಡುಪಿಯ ಕೃಷ್ಣರಾಯನ್ನ
(ರಾಗ ನೀಲಾಂಬರಿ ಅಟತಾಳ)
ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ-
ಮಂಡಲದೊಳಗೆ ಉ-
ದ್ದಂಡ ಮೋಹಿಪನ ||ಪ||
ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ
ಚಂದ್ರಮೌಳೀಶ್ವರನ ಚರಣಕೆರಗಿ
ಆಮೇಲೆ ನಾಬಂದು ಅನಂತೇಶ್ವರನ್ನ ಕಂಡು
ಹನುಮಂತನ ಪಾಡಿ ಮನದಿ ನಿಲಿಸಿ ||
ಸುತ್ತು ನದಿಯ ಕಂಡೆ ಸೂರ್ಯನ ಪ್ರಭೆ ಕಂಡೆ
ಅಲ್ಲಿದ್ದ ಮಧ್ವಸರೋವರವ ಕಂಡೆ
ಮಧ್ವಮತದ ಅಷ್ಟಮುನಿಗಳ ಕಂಡೆ
ಪ್ರಸಿದ್ಧವಾಗಿರುವ ಶ್ರೀ ಉಡುಪಿಯ ಕೃಷ್ಣನ ಕಂಡೆ ||
ಉಂಗುರ ಉಡಿದಾರ ಉಡಿ ಘಂಟೆ ನಾ ಕಂಡೆ , ನಾನು
ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ
ದಿಂ ಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ , ನಾನು
ಪುರಂದರವಿಠಲನ್ನ ಪದಕಮಲವ ಕಂಡೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments