ಪದ / ದೇವರನಾಮ

ದಾಸರ ಪದಗಳು

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ || ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ ಪ || ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರಪುಷ್ಕರಣಿ ಸಾನವ ಮಾಡಿ ಆ ನಂದದಿಂದಲಿ ರಂಗನ ನೋಡದ || ೧ || ಹರಿಪಾದೋದಕ ಸಮ ಕಾವೇರಿ ವಿರಜಾನದಿ ಸಾನವ ಮಾಡಿ
ದಾಸ ಸಾಹಿತ್ಯ ಪ್ರಕಾರ

ಪವನ ಸಂಭೂತ ಒಲಿದು ತವಕದಿ ಕಾಯಬೇಕು

ಪವನ ಸಂಭೂತ ಒಲಿದು ತವಕದಿ ಕಾಯಬೇಕು ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||
ದಾಸ ಸಾಹಿತ್ಯ ಪ್ರಕಾರ

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ | ಪ | ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |
ದಾಸ ಸಾಹಿತ್ಯ ಪ್ರಕಾರ

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನಯ ಪಾದಾರ ವಿಂದವ ತೋರೋ ಮುಕುಂದನೆ |ಪ| ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ| ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆಂದೆನ್ನ ಕು೦ದುಗಳೆಣಿಸದೆ
ದಾಸ ಸಾಹಿತ್ಯ ಪ್ರಕಾರ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ ||ಪ|| ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ || ಕಪಟನಾಟಕದ ಮರಿಯಾನೆ | ನಿಕಟ ಸಭೆಯಲಿ ನಿಂತಾನೆ ಶಕಟನ ಭಂಡಿಯ ಮುರಿದಾನೆ || ಕಪಟನಾಟಕದಿಂದ ಸೋದರ ಮಾವನ | ನಕಟಕಟೆನ್ನದೆ ಕೊಂದಾನೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪುರಂದರ ಗುರುಂ ವಂದೇ

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ| ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||
ದಾಸ ಸಾಹಿತ್ಯ ಪ್ರಕಾರ

ಜಯ ವಾಯು ಹನುಮಂತ ಜಯ ಭೀಮ ಬಲವಂತ

ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮಿಸಿ ಬೇಡುವೆ ವರಗಳ ನಿನ್ನ

ನಮಿಸಿ ಬೇಡುವೆ ವರಗಳ ನಿನ್ನ ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ || ವಿಮಲ ಸುಮತಿ ಜನರತಿಪ್ರೀಯಾ - ಪಾದ ಕಮಲಗಳಿಗೆರಗುವೆನೊ ಜೀಯಾ ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ || ಕ೦ಡಕ೦ಡವರನು ಬೇಡಿ ನೊ೦ದೆ ಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮ ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ ಸುಲಲಿತಕಮ೦ಡಲದ೦ಡವನ್ನೆ ಧರಿಸಿಹನು ಪೇಳಮ್ಮಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮ೦ತ್ರಾಲಯ ಮ೦ದಿರ ಮಾ೦ಪಾಹಿ

ಮ೦ತ್ರಾಲಯ ಮ೦ದಿರ ಮಾ೦ಪಾಹಿ || ಪ || ಮಧ್ವಾಭಿಧಮುನಿಸದ್ವ೦ಶೋದ್ಭವ ಅದ್ವೈತಾರಣ್ಯ ಸದ್ವೀತಿಹೋತ್ರ || ೧ || ಸುಧೀ೦ದ್ರಯತಿಕರಪದುಮೋದ್ಭವ ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ || ದ೦ಡಧರ ಕೋದ೦ಡಪಾಣಿಪದ ಪು೦ಡರೀಕಧ್ಯಾನ ತ೦ಡಮತೇ ಹೇ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು