ಪದ / ದೇವರನಾಮ

ದಾಸರ ಪದಗಳು

ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ || ಕೊರಳೋಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಲಾಸ ವಾಸ

ರಾಗ : ಕಾಂಬೋದಿ ತಾಳ : ಖಂಡಛಾಪು ಕೈಲಾಸವಾಸ ಗೌರೀಶ ಈಶಾ.. ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... || ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೋ ಮಹದೇವನೇ.. ಅಹಿಭೂಷಣನೆ ಎನ್ನ ಅವಗುಣಗಳೆಣಿಸದೆಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದಾ ಎನ್ನ ಹೃದಯದಲ್ಲಿ.........

ರಾಗ : ದರ್ಬಾರ್ ಕಾನಡ ತಾಳ : ರೂಪಕ ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ.. ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ..... ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ... ವೇಣುಗಾನ ಲೋಲನ ಕುಳ್ಳಿರಿಸಿ ಙ್ಞಾನದಿಂದ ಭಜಿಸುವೇನೋ..... || ಸದಾ...||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ ( ಶ್ರೀನಿವಾಸದೇವರು ಬೇಟೆಗೆ ಹೋದುದು)

( ರಾಗ ಕಾಂಭೋಜ ಏಕತಾಳ) ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧|| ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨|| ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆನ್ನ ಎಬ್ಬಿಸಿದೆ

(ರಾಗ ಭೂಪಾಳಿ ಝಂಪೆತಾಳ) ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ|| ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶುದ್ಧಿಗಳ ಮಾಡಿ ನದಿಯಲಿ ನಿಂತು ಸ್ತೋತ್ರಂಗಳನೆ ಮಾಡಿ ತೀರ್ಥಾಭಿಮಾನಿ ಪ್ರಾರ್ಥನಂಗಳನೆ ಮಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಡಮಾಡಿದರು ಯಮನಾಳುಗಳು

(ರಾಗ ನಾದನಾಮಕ್ರಿಯೆ ಆದಿತಾಳ) ದಡಮಾಡಿದರು ಯಮನಾಳುಗಳು ಓಡಿ ಬಂದರು ಏಳೇಳೆನುತ ಏಳಾಲೆಳೆದರು , ಪಾಪಿಯ ಬೀಳಾಲೆಳೆದರು || ಪ|| ಭವಂತಿ ಮಾಳಿಗೆ ದೊಡ್ಡ ಪಡಸಾಲೆ ಚಿಕ್ಕಮಕ್ಕಳು ದೊಡ್ಡಮಕ್ಕಳು ಆದ ಮದುವೆಯು ಆಗದ ಮದುವೆಯು ಒಂದೊಂದು ಸಾವಿರ ಸಾಲವ ಕೊಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತ್ವಂ ಶಾರದಂ

(ರಾಗ ಕಾಂಭೋಜ ಆದಿತಾಳ) ತ್ವಂ ಶಾರದಂ ||ಪ|| ಒಂದೆಂಟು ಲೆಕ್ಕದ ದ್ವಾರ, ಅದು ಒಂದು ದಿನ ತೊಳೆಯದಿದ್ದರೆ ವಿಕಾರ , ಸಂದು- ಸಂದಿಲಿ ಕ್ರಿಮಿರಾಶಿ ಘೋರ , ಅದು ಶುಕ್ಲ ಶೋಣಿತ ಸಂಬಂಧ ಶರೀರ || ಕಣ್ಣಿಂದ ಸಿಕ್ಕು ಸೋರುವ್ಯ್ದು , ಮೂಗು ಕಣ್ಣಿಂದ ಶ್ಲೇಷ್ಮ ತೋರುವುದು , ಅದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳಯ್ಯ ಬೆಳಗಾಯಿತು (೨)

(ಉದಯರಾಗ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಏಳು ಹೃಷಿಕೇಶ ಏಳು ರವಿಶಶಿವಂದ್ಯ ಏಳು ಪಶುಗಳ ಕಾಯ್ದೆ ಪಾಲಿಸಿದೆ ಗೋಕುಲವ ಏಳು ಯಶೋದೆಸುತನೆ ಏಳು ಭೂಸತಿರಮಣ ||ಅ|| ಪಚ್ಚೆ ಮುಡಿವಾಳಗಳು ಅಚ್ಚ ಶಾವಂತಿಗೆಯು ಬಿಚ್ಚನೆ ಜಾಜಿ ಸಂಪಿಗೆಯು ಪುನ್ನಾಗ ಕುಕ್ಷಿಯೊಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳಯ್ಯ ಬೆಳಗಾಯಿತು

(ರಾಗ ಭೂಪಾಳಿ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ ಸೆಳೆಮಂಚದಿಂದ ಏಳೊ || ವೇದವನು ತರಲೇಳು ಮಂದರವ ಪೊರಲೇಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ

(ರಾಗ ಭೂಪಾಳಿ ಅಟತಾಳ) ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ|| ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ|| ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ ಶಿಶುವ ಪಿಡಿದಂಬರಕೆ ಸಾಗಿಪಾನೆ ಎಸೆದು ತೃಣಾವರ್ತನ ಭರದಿ ಮುರಿದಾನೆ ಶಿಶುಕೃಷ್ಣ ತುರುಗಳನು ಕಾಯಿದಾನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು