ನಮಿಸಿ ಬೇಡುವೆ ವರಗಳ ನಿನ್ನ

ನಮಿಸಿ ಬೇಡುವೆ ವರಗಳ ನಿನ್ನ

ನಮಿಸಿ ಬೇಡುವೆ ವರಗಳ ನಿನ್ನ ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ || ವಿಮಲ ಸುಮತಿ ಜನರತಿಪ್ರೀಯಾ - ಪಾದ ಕಮಲಗಳಿಗೆರಗುವೆನೊ ಜೀಯಾ ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ || ಕ೦ಡಕ೦ಡವರನು ಬೇಡಿ ನೊ೦ದೆ ಕ ಮ೦ಡಲು ದ೦ಡಧಾರಿ ನೀ ಗತಿಯೆ೦ದೆ ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ ದ೦ಡಪಾಣಿಯ ಪಾದ ತೋರಿಸು ತ೦ದೆ || ೨ || ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦ ಗಾಸುನದಿನಿಲಯಾ ಅಘಾ೦ಬುಧಿ ಪೋತ ವಾಸುಕಿಶಯನ ಜಗನ್ನಾಥ ವಿಠ್ಠಲ ದಾಸರ ಪೋಷಕ ಲಾಲಿಸಿ ಪೋತಾ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು