ಈ ಜೀವ ಈ ದೇಹ
ರಾಗ : ಕಲ್ಯಾಣವಸಂತ ಖಂಡಛಾಪುತಾಳ
ಈ ಜೀವ ಈ ದೇಹ ಇದ್ದು ಫಲವೇನೋ
ರಾಜೀವ ನೇತ್ರನಾ ನೋಡದ ಮೇಲೇ
ರಂಗರಾಜನ ಪಾದ ಭೃಂಗನೆಂದೆನಿಸುವಾ
ತುಂಗ ಪಾದವ ತೊಳೆದು ತೀರ್ಥವಾವಹಿಸಿ
ಹಿಂಗದೆ ಪ್ರತಿದಿನ ಹಿರಣ್ಯಾರಿ ದೇವನ್ನ
ಮಂಗಳಪ್ರದನಾದ ರಂಗನ ನೋಡದ ಮೇಲೇ ..||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಈ ಜೀವ ಈ ದೇಹ
- Log in to post comments