ಶ್ರೀ ಶ್ರೀಪಾದರಾಜರು

ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ?

ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ ||ಪಲ್ಲವಿ|| ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ|| ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ ||೧||
ದಾಸ ಸಾಹಿತ್ಯ ಪ್ರಕಾರ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ || ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ ಪ || ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರಪುಷ್ಕರಣಿ ಸಾನವ ಮಾಡಿ ಆ ನಂದದಿಂದಲಿ ರಂಗನ ನೋಡದ || ೧ || ಹರಿಪಾದೋದಕ ಸಮ ಕಾವೇರಿ ವಿರಜಾನದಿ ಸಾನವ ಮಾಡಿ
ದಾಸ ಸಾಹಿತ್ಯ ಪ್ರಕಾರ