ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮ ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ ಸುಲಲಿತಕಮ೦ಡಲದ೦ಡವನ್ನೆ ಧರಿಸಿಹನು ಪೇಳಮ್ಮಯ್ಯ ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ || ಸು೦ದರಚರಣರವಿಂದ ಸುಭಕುತಿಯಲಿ೦ದ ಪೇಳಮ್ಮಯ್ಯ ವ೦ದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ ಚ೦ದದಿಲ೦ಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸಘದಿಂದ ರಹಿತನೆ || ೨ || ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ ಅಭಿವ೦ದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ ಶುಭಗುಣನಿಧಿ ಶ್ರೀ ರಾಘವೇ೦ದ್ರಯತಿ ಅಬುಜ ಭವಾ೦ಡದೊಳು ಪ್ರಬಲ ಕಾಣಮ್ಮ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು