ಪಾಲಿಸೋ ನರಸಿಂಹ
( ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) )
ಪಾಲಿಸೋ ನರಸಿಂಹ ಪಾಲಿಸೊ ||ಪ||
ಪಾಲಿಸೊ ಪರಮಪಾವನ ಕಮ-
ಲಾಲಯ ನಂಬಿದೆ ನಿನ್ನ ಆಹಾ
ಬಾಲೇಂದುಕೋಟಿಯ ಸೋಲಿಪ ನಖತೇಜ
ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ||
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯ್ದೆಯೊ ಭಕ್ತಪ್ರಿಯಸಖ
ಸಂದೋಹ ಮೂರುತಿ ಆಯತಾಕ್ಷ
ಎಂದೆಂದು ಬಿಡದಿರು ಕೈಯ ಆಹಾ
ವೃಂದಾರಕೇಂದ್ರಗಳ ಬಂದ ದುರಿತಗಳ
ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧||
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ತಾಪ, ದೂರ
ಇರದಿರೊ ಹರಿ ಸಪ್ತದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹಾ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಪಾಲಿಸೋ ನರಸಿಂಹ
- Log in to post comments