ರಮಾಮನೋಹರನೆ

ರಮಾಮನೋಹರನೆ

ರಾಗ - ಬಿಲಹರಿ(ಭೈರವಿ) ರೂಪಕತಾಳ (ದಾದರಾ) ಕೃತಿಕಾರರು-ಜಗನ್ನಾಥದಾಸರು ರಮಾಮನೋಹರನೆ ದೀನ- ಪತಿತಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾ ಅರ- ವಿಂದನಯನ ಬಂದು ರಕ್ಷಿಸೋ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ- ವರದ ವಾಮನಾಧೃತ ಕರದ ಪರಶುರಾಮ ರಾಘವ ಯದುಕುಲೋತ್ತಮಾ ||೨|| ಲೋಕಮೋಹಕ ಬುದ್ಧನಾಗಿ ತೇಜಿಯನೇರಿದಾ ಜಗ- ದೇಕ ಜಗನ್ನಾಥವಿಠಲ ಭೀಕರಾಂತಕಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು