Skip to main content

ಜಗನ್ನಾಥದಾಸ

ಅನಘನೆಂದೊಮ್ಮೆ ನೆನೆದ ಮಾನವ

ಅನಘನೆಂದೊಮ್ಮೆ ನೆನೆದ ಮಾನವ ಪಾಪ-

ವನದಿ ದಾಟುವ ಬಹುವೇಗದಿಂದ

ಜನನ ಮರಣ ಭಯವಿನಿತಿಲ್ಲ ಅವನೇ

ಸಜ್ಜನ ಶಿರೋಮಣಿ ಕಾಣೋ  ಸರ್ವರೊಳು

ಜನಕ  ಜನನಿ ಮೊದಲಾದ ನೂರೊಂದು ಕುಲವ

ಪಾವನ ಮಾಡುವನು ಪ್ರತಿದಿನದಲಿ

ವನಿತಾದಿ ವಿಷಯಂಗಳನುಭವಿಸುತ  ತನ್ನ

ಮನೆಯೊಳಿರಲವ ಜೀವನ್ಮುಕ್ತನೋ

ಸನಕಾದಿಮುನಿಗಳ  ಮನಕೆ ನಿಲುಕದಿಪ್ಪ

ಘನಮಹಿಮನೇ ಬಂದು ಕುಣಿವ ಮುಂದೆ

ಹನುಮವಂದಿತ ಜಗನ್ನಾಥವಿಠಲರೇಯ

ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ--ಜಗನ್ನಾಥದಾಸರು


ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಇಂದುಶೇಖರ ಶಿವ ನಂದಿವಾಹನ


ಇಂದುಶೇಖರ ಶಿವ ನಂದಿವಾಹನ ಶೂಲಿ

ಸ್ಕಂದಗಣಪರ ತಾತ ದಂದಶೂಕಕಲಾಪ

ಮಂದಾಕಿನೀಧರ ಪುರಂದರಮುಖಸುರ-

ವೃಂದವಿನುತಪಾದದಿಂದ ಶೋಭಿತ ದೇವ

ಕಂದುಕಂಧರ ತ್ರಿಪುರಸಂದೋಹಹರ ಹರ

ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು

ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ

ಬಂದೆನ್ನ ಮನೋರಥ ಇಂದು ಪೂರ್ತಿ ಸೋ ಗುರೋ

ಗಂಧವಾಹನತನಯ ಇಂದಿರಾಪತಿ ಗುರುಜಗನ್ನಾಥವಿಠಲಾ -

ನಂದಬಡುವನಿದಕೆ  ಸಂದೇಹ ಇನಿತಿಲ್ಲ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಬಾಗಲವಾಡದ ಬೆಟ್ಟದ ಮೇಲೆ ತಿರುಪತಿಯ ಬ್ರಹ್ಮೋತ್ಸವವನ್ನು ನೋಡಿ ಜಗನ್ನಾಥದಾಸರು ರಚಿಸಿದರೆನ್ನಲಾದ ಸ್ತುತಿ:

   ²æà dUÀ£ÁßxÀzÁ¸ÀgÀÄ ¥Áæyð¹zÁUÀ wgÀĪÀįÉAiÀÄ §æºÉÆäÃvÀìªÀªÀ£ÀÄß ¨ÁUÀ®ªÁqÀzÀ ¨ÉlÖzÀ ªÉÄÃ¯É vÉÆÃj¹zÀ ²æòæäªÁ¸À£À£ÀÄß zÁ¸ÀgÀÄ ¸ÀÄÛw¹ gÀa¹zÀgÉAzÀÄ ºÉüÀ¯ÁUÀĪÀ QÃvÀð£É:

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages