ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನುತ |ಪ| ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನುತ |ಅ ಪ| ಪಕ್ಷಿ ರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿತೆರೆದು ಬೇಗ ಈಕ್ಷಿಸೆಂದು ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತಾ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ|| ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರಮುಗಿದು ಓಲೈಪರು ಘನ ಶುಕ ಶೌನಕ ವ್ಯಾಸ ವಾಲ್ಮೀಕರು ನೆನೆದು ನೆನೆದು ಕೊಂಡಾದುವರು ಹರಿಯೇ|| ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದು ಉದಯಾಚಲದಿ ನಿಂದು ಕಿರಣದೋರುವನು ಭಾಸ್ಕರನು ಶ್ರೀ ಹರಿಯೆ|| ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳೊ ಮಧುಸೂದನ ಕೃಷ್ಣ|| ಮುರ ಮಥನನೆ ನಿನ್ನ ಚರಣದ ಸೇವೆಯ ಕರುಣಿಸಬೇಕೆಂದು ತರುಣಿಯರು ಪರಿಪರಿಯಿಂದಲೆ ಸ್ಮರಿಸಿ ಹಾರೈಪರು ಪುರಂದರವಿಠಲ ನೀನೇಳೋ ಹರಿಯೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು