ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ

ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ

(ರಾಗ ಧನಶ್ರೀ ಅಟತಾಳ) ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ|| ಅಡಿಗೆಮನೆಯಲ್ಲಿ ಗಡಬಡ ಬರುವುದು ಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು || ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡು ಹಾಲಿನ ಮೇಲಿನ ಕೆನೆ ಕಾಲಲಿ ತಿಂದು || ಹಾಗಲು ಹೀಗಲು ಮೀಸಲಾಕಿದ ಹಾಲು ಪುರಂದರವಿಠಲಗೆ ಸೇರಿತು ಮಾಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು