ಇರಬೇಕು ಇರದಿರಬೇಕು

(ರಾಗ ಪೂರ್ವಿ ಆದಿತಾಳ) ಇರಬೇಕು ಇರದಿರಬೇಕು ||ಪ|| ಸಂಸಾರದಿ ಜನಕಾದಿ ರಾಜಋಷಿಗಳಂತೆ ||ಅ|| ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ ಮಿಥಿಲೇಶ "ಮಮ ಕಿಂಚಿನ್ನ ದಹ್ಯತೇ" ಎಂಬಂತೆ ಇರಬೇಕು || ದಧೀಚಿ ಋಷಿ ತನ್ನ ಅಸ್ಥಿ ಸುರರಿಗಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದಿರಾರಮಣ ಗೋವಿಂದ

(ರಾಗ ಆರಭಿ ಆದಿತಾಳ ) ಇಂದಿರಾರಮಣ ಗೋವಿಂದ ನಿನ್ನಯ ಪಾದ- ದ್ವಂದ್ವವೆನಗೆ ಸಾಕೆಲೊ ||ಪ|| ಅಂದು ಬ್ರಹ್ಮಾಂಡವ ಸೀಳಿದಂಥ ಪಾದ ಎಂದೆಂದು ಭಕುತರು ಲಾಲಿಸುವ ನಿನ್ನ ||ಅ|| ನಾರಾಯಣ ನಿನ್ನ ನಾಮವು ಅಜಮಿಳನ ಘೋರಪಾಪವ ಅಟ್ಟಿತೊ ಸಾರಿ ನಿನ್ನನು ಭಜಿಪ ಚಾರು ಭಕ್ತರಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವರವೇದಪುರಾಣ ( ಸರಸ್ವತಿ ಸ್ತೋತ್ರ)

(ರಾಗ ನಾಟ) ವರವೇದ ಪುರಾಣ ವಿವಿಧ ಶಾಸ್ತ್ರಗಳಿಗೆ ಸರಸಿಜೋದ್ಭವನರಸಿ ಸರಸ್ವತಿದೇವಿಯ ಪರಮ ಮುಖ್ಯಾಭಿಮಾನಿಯೆಂದು ತಿಳಿದು ನಿರತ ಭಜಿಸುವ ಜನಕೆ ನಿಜಗತಿಯ ಪಾಲಿಸುವ ಸಿರಿಯರಸ ಪುರಂದರವಿಠಲ ತಾನೊಲಿವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇರಬೇಕು ಇಲ್ಲದಿರಬೇಕು

(ರಾಗ ನಾದನಾಮಕ್ರಿಯೆ ಛಾಪುತಾಳ) ಇರಬೇಕು ಇಲ್ಲದಿರಬೇಕು ||ಪ|| ಹರಿದಾಸರು ಸಂಸಾರದೊಳಗೆ ||ಅ|| ಮಕ್ಕಳು ಮತಿವಂತರಾದರೆ ಮನೆಯಲ್ಲಿ ಅಕ್ಕರದಿಂದಲಿ ಕೂಡಿರಬೇಕು ಚಿಕ್ಕವನ ಬುದ್ಧಿ ಭೇರುಂಡನಾದರೆ ಘಕ್ಕನವರ ಕೂಡ ಹೊರಗಾಗಬೇಕೈ || ಕುಲಸತಿಯಾದರೆ ಕೂಡಿರಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡು ಮನ ಹಿಗ್ಗಿತು ರಂಗಯ್ಯನ

(ರಾಗ ಶಂಕರಾಭರಣ , ಛಾಪುತಾಳ) ಕಂಡು ಮನ ಹಿಗ್ಗಿತು ರಂಗಯ್ಯನ ,ಕಾಣದೆ ಮನ ನಿಲ್ಲದು ||ಪ|| ಮಲ್ಲಮಲ್ಲರ ಗೆಲಿದ ರಂಗಯ್ಯ , ಮಲ್ಲಗಂಟನೆ ಬಿಗಿದ ಬಿಲ್ಲಹಬ್ಬಕೆ ಬಂದು ಮಾವ ಕಂಸನ ಕೊಂದ || ಕತ್ತಲೆಯನು ಸುತ್ತಿರೆ ರಂಗಯ್ಯ ಕಸ್ತೂರಿ ತಿಲಕನಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ತನುವ ನಂಬಲು ಬೇಡೊ ಜೀವವೆ

(ರಾಗ ದರ್ಬಾರು ಅಟತಾಳ) ಈ ತನುವ ನಂಬಲು ಬೇಡೊ ಜೀವವೆ ||ಪ|| ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೊ ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ||ಅ|| ಜರೆಯು ಮರಣದಿಂದ ಭರಿತವಾದುದೀ ಕಾಯ ಸ್ಥಿರವೆಂದು ನಂಬಿ ನೀ ಮರುಳಾಗಬೇಡ || ಧನಧಾನ್ಯ ಪಶುಪತ್ನಿ ಸ್ಥಿರವೆಂದು ತಿಳಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಾಲಿಸಿದಳು ಮಗನ, ಯಶೋದೆ

(ರಾಗ ಆರಭಿ ಆದಿತಾಳ) ಲಾಲಿಸಿದಳು ಮಗನ, ಯಶೋದೆ, ಲಾಲಿಸಿದಳು ಮಗನ |ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ || ಬಾಲಕನೆ ಕೆನೆಹಾಲು ಮೊಸರನೀವೆ ಲೀಲೆಯಿಂದಲಿ ಎನ್ನ ತೋಳಲಿ ಮಲಗೆಂದು || ಮುಗುಳುನಗೆಯಿಂದ ಮುದ್ದು ತಾ ತಾರೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ

( ರಾಗ ಶಂಕರಾಭರಣ ಆದಿತಾಳ) ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ|| ಸ್ನಾನವೇತಕೆ ಸಂಧ್ಯಾಜಪತಪವೇತಕೆ ಮೌನವೇತಕೆ ಮೇಲೆ ವ್ರತವೇತಕೆ ಮಾನಸದಲಿ ವಿಷ್ಣುಪದ ಧ್ಯಾನಿಸುವ ಮಹಾ- ಜ್ಞಾನಿಗಳ ಸಂಗಸುಖದೊಳಿರ್ಪರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ನೆನೆವನೆ ಅಜ್ಞಾನಿ ?

( ರಾಗ ಪೂರ್ವಿ ಆದಿತಾಳ) ಹರಿಯ ನೆನೆವನೆ ಅಜ್ಞಾನಿ , ಘೋರ- ದುರಿತಗಳಿಗೆ ಸಿಲುಕುವನೆ ಸುಜ್ಞಾನಿ ||ಪ|| ತಂದೆಯ ಬಯ್ಯುವನೆ ಪುತ್ರ , ಕಡು ನಿಂದೆಯ ಮಾಡ್ವನೆ ಪರಮಪವಿತ್ರ ಬಂಧನವ ಗೆಯ್ವನೆ ಮಿತ್ರ , ರಣಕೆ ಮುಂದಾಗಿ ನಡೆಯದಿರುವನೆ ಕ್ಷಾತ್ರ || ದಾನಂಗಳೀವನೆ ಪಾಪಿ , ಕಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾವಾಗಲು ಚಿಂತೆ ಜೀವಕ್ಕೆ

(ರಾಗ ಪಂತುವರಾಳಿ ಛಾಪುತಾಳ) ಯಾವಾಗಲು ಚಿಂತೆ ಜೀವಕ್ಕೆ ||ಪ|| ಈ ಜೀವ ಒಂದು ಪರಿಯಾಗೋ ತನಕ || ಹೆಂಡತಿಲ್ಲದ ಚಿಂತೆ , ಹೆಂಡತಿದ್ದರು ಚಿಂತೆ ಚಂಡಿ ಕುರೂಪಿಯಾದರು ಚಿಂತೆಯು ಕೊಂಡನಾಗಿ ಪೊತ್ತು ತಿರುಗುವ ಚಿಂತೆ ಭೂ- ಮಂಡಲದೊಳಗೆಲ್ಲ ಚಿಂತೆ ಕಾಣಣ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು