ಯಾರಮ್ಮ ಮಾತ ಸಾರಮ್ಮ

(ರಾಗ ಮಾಂಜಿ ಅಟತಾಳ) ಯಾರಮ್ಮ ಮಾತ ಸಾರಮ್ಮ ||ಪ|| ದೂರಮಾರ್ಗದಿ ಬಂದು ದುಃಖ ಬಹಳವಮ್ಮ ನೀರನ್ನವಾದರು ಸಾರಾಮೃತವಮ್ಮ ||ಅ|| ಪತಿಗಳ ಕಾಣದೆ ಪಥಪಥ ಹುಡುಕುತ್ತ ಅತಿಶಯದಲಿ ನಿನ್ನ ಹತ್ತಿರ ಬಂದೆವಮ್ಮ || ಬಹಲ ಕಾಲ ವ್ಯಾಳವೇಣಿಯ ಪತಿಗಳ ಬಹಳ ಕದನ ಮಾಡಿ ಲೋಲಾಕ್ಷಿ ಪೊರಟರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯದುಕುಲನಂದನನ ನೋಡುವ ಬಾರೆ

(ರಾಗ ಶ್ರೀ ಆದಿತಾಳ ) ಯದುಕುಲನಂದನನ ನೋಡುವ ಬಾರೆ ಲಲಿತಾಂಗಿ ||ಪ|| ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ|| ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ || ಸಣ್ಣ ಪೊಂಗೊಳನೂದುತ ಕಣ್ಣ ಸನ್ನೆಯ ಮಾಡುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

(ರಾಗ ಸುರುಟಿ ಆದಿತಾಳ) ಮಂಗಳಂ ಜಯ ಮಂಗಳಂ ||ಪ|| ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ || ವಕ್ಷಕ್ಕೆ ಮಂಗಳ ವಟು ವಾಮನಗೆ ಪಕ್ಷಕ್ಕೆ ಮಂಗಳ ಪರಶುರಾಮಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೊ ಬ್ರಹ್ಮಾದಿವಂದ್ಯ

(ರಾಗ ಮಧ್ಯಮಾವತಿ ಅತತಾಳ) ಬಾರೊ ಬ್ರಹ್ಮಾದಿವಂದ್ಯ ||ಪ|| ಬಾರೊ ವಸುದೇವನಂದನ ||ಅ|| ಧಿಗಿಧಿಗಿ ನೀ ಕುಣಿದಾಡುತ ಬಾರೊ ದೀನರಕ್ಷಕನೆ , ಚೆಂದದಿ ಜಗದೀಶ ನೀ ಕುಣಿದಾಡುತ ಬಾರೊ ಚೆನ್ನಕೇಶವನೆ || ಗೊಲ್ಲರ ಮನೆಗೆ ಪೋಗಲುಬೇಡ ಗೋವಿಂದ ಕೇಳೊ, ನಿನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೂರು ಮಾಡುವರೇನೆ ಕೃಷ್ಣಯ್ಯನ

(ರಾಗ ಮಧ್ಯಮಾವತಿ ಅಟತಾಳ) ದೂರು ಮಾಡುವರೇನೆ ಕೃಷ್ಣಯ್ಯನ ದೂರು ಮಾಡುವರೇನೆ ||ಪ|| ಮೂರುಲೋಕವನೆಲ್ಲ ಸಲಹೋ ಕೃಷ್ಣಯ್ಯನ ||ಅ|| ನಂದಗೋಕುಲದಲಿ ಮಂದೆ ಗೋವುಗಳ ಮೂಂದೆ ಕೊಳಲನೂದಿ ಚಂದದಿ ಬರುವನ || ಕಾಮಕುಂದಲೆನ್ನ ಕಳವಳಗೊಳ್ಳುತ ಸೋಮಸುಂದರ ಮುದ್ದು ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ

(ರಾಗ ಭೈರವಿ ಛಾಪುತಾಳ) ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ ||ಪ|| ಬಡವ ನಾನೆಂದು ನಿನ್ನ ಕಾಡುವನಲ್ಲವೊ ||ಅ|| ಒಡಲು ತುಂಬದು ಎಂದು ಬಳಲಿಸಬರಲಿಲ್ಲ ಸಡಗರದ ಭಾಗ್ಯ ಬೇಡಲಿಲ್ಲ ಮಡದಿ ಮಕ್ಕಳಿಗಾಗಿ ಕಡುಮೋಹ ಎನಗಿಲ್ಲ ಬಿಡದೆ ನಿನ್ನಯ ನಾಮಸ್ಮರಣೆಯೊಂದೇ ಸಾಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು

(ರಾಗ ನಾದನಾಮಕ್ರಿಯೆ ಆದಿತಾಳ) ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ ದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನ ನಂಬಿದಾಕ್ಷಣದಲ್ಲಿ || ದೃಢ ಮಾಡಾತನ ಸ್ಮರಣೆ , ಭಕ್ತರ ಬಿಡಾತನು ಬಲ್ಲತಿ ಕರುಣಿ || ಪುರಂದರವಿಠಲನ ನಂಬು , ನಿನಗಿಹ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ

(ರಾಗ ರೇಗುಪ್ತಿ ಝಂಪೆತಾಳ) ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ ಹೇಳಲಂಜುವೆನು ನಿನ್ನ ಬಾಳಬಳಗಗಳೆಲ್ಲ ಪಾಲಿಸು ಅಭೀಷ್ಟವನು ವ್ಯಾಳಗಿರಿ ವೆಂಕಟೇಶ ಈಶ ||ಪ|| ತಲೆಹೊಡಕ ಹಿರಿಯ ಮಗ ಧರೆಗೆ ಪೂಜಿತನಲ್ಲ ಬಲು ಭಂಡ ಕಿರಿಯ ಮಗನು ಲಲನೆ ಲೋಭಿಗಳ ಮನೆ ನಿಲಿಸಿಹಳು ಸೊಸೆ ತಾನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೆಟ್ಟು ನೆಂಟರ ಸೇರೋದು ಬಹಳ ಕಠಿಣ

(ರಾಗ ಕಾಂಭೋಜ ಛಾಪುತಾಳ) ಕೆಟ್ಟು ನೆಂಟರ ಸೇರೋದು ಬಹಳ ಕಠಿಣ ||ಪ|| ಇನ್ನು , ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ||ಅ|| ವಿಷವ ಕುಡಿಯಲುಬಹುದು, ಎಸೆದ ಶೂಲದ ಮುಂದೆ ಒಸಗಿ ಬಹುವೇಗದಿಂ ಹಾಯಬಹುದು ವಿಷದ ಕುಂಡದ ಒಳಗೆ ಮುಳುಗಿಕೊಂಡಿರಬಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೆಂಡಕೆ ಜಿರಳೆ ಮುತ್ತುವುದುಂಟೆ

(ರಾಗ ಕಾಂಭೋಜ ಝಂಪೆತಾಳ) ಕೆಂಡಕೆ ಜಿರಳೆ ಮುತ್ತುವುದುಂಟೆ ಪಾಂಡುರಂಗನ ದಾಸರಿಗೆ ಭಯವುಂಟೆ ||ಪ|| ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ ಶ್ವಾನ ಹೆಬ್ಬುಲಿ ಕೂಡೆ ಸರಸವುಂಟೆ ಏನೆಂಬೆ ಮನದಲ್ಲಿ ಸರ್ವದಾ ನಿನ್ನಂಘ್ರಿ ಧ್ಯಾನದೊಳಿದ್ದವಗೆ ದಾರಿದ್ರ್ಯವುಂಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು