ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ
( ರಾಗ ಪುನ್ನಾವರಾಳಿ ಛಾಪುತಾಳ )
ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ ||ಪ||
ಕಾಲನವರು ಕರೆಯಬಂದರೆ ಏನು ಹೇಳಲಿ ಸೊಲ್ಲ ||ಅ||
ಬಾಲನಾಗಿ ಜನಿಸಿ , ತಾಯ ಮೊಲೆಗೆ ಭ್ರಮಿಸಿ
ಹಾಲು ಬೆಣ್ಣೆ ಉಣಿಸಿ , ಹಸುಗೂಸು ಎಂದೆನಿಸಿ ||
ಚೆಂಡುಬುಗರಿಯಾಡಿ , ಚೆಲುವ ವಸನ ಬೇಡಿ
ಹಿಂಡು ದುಷ್ಟರ ಕೂಡಿ , ಕ್ರೂರಕೃತ್ಯ ಮಾಡಿ ||
ಪ್ರಾಯದಲಿ ಸಿಕ್ಕಿ , ಮಾಯದಲಿ ಸೊಕ್ಕಿ
ಸ್ತ್ರೀಯರೊಡನೆ ಮಿಕ್ಕಿ , ಹೇಯ ಬುದ್ಧಿಲಿ ಸಿಕ್ಕಿ ||
ಮಕ್ಕಳಾಧೀನದಿ ಸಿಕ್ಕಿದೆ ದೈನ್ಯದಿ
ಕಕ್ಕುಲತಿ ಬುದ್ಧಿ ಕೊಕ್ಕದಿಟ್ಟು ಮೋದದಿ ||
ರಾಮಪೂಜೆಯನ್ನು ಮಾಡಲಿಲ್ಲವು ಇನ್ನು
ಸ್ವಾಮಿ ಪುರಂದರವಿಠಲನ್ನ ಪ್ರೇಮಕ್ಕೆ ದೂರನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments