ಇರಬೇಕು ಇಲ್ಲದಿರಬೇಕು

ಇರಬೇಕು ಇಲ್ಲದಿರಬೇಕು

(ರಾಗ ನಾದನಾಮಕ್ರಿಯೆ ಛಾಪುತಾಳ) ಇರಬೇಕು ಇಲ್ಲದಿರಬೇಕು ||ಪ|| ಹರಿದಾಸರು ಸಂಸಾರದೊಳಗೆ ||ಅ|| ಮಕ್ಕಳು ಮತಿವಂತರಾದರೆ ಮನೆಯಲ್ಲಿ ಅಕ್ಕರದಿಂದಲಿ ಕೂಡಿರಬೇಕು ಚಿಕ್ಕವನ ಬುದ್ಧಿ ಭೇರುಂಡನಾದರೆ ಘಕ್ಕನವರ ಕೂಡ ಹೊರಗಾಗಬೇಕೈ || ಕುಲಸತಿಯಾದರೆ ಕೂಡಿರಬೇಕು ಸುಲಭದಿಂದಲಿ ಸ್ವರ್ಗ ಸೂರಾಡಬೇಕು ಕಲಹಗಂಟಿ ಸತಿ ಕರ್ಕಶೆಯಾದರೆ ಹಲವು ಪರಿಯಿಂದ ಹೊರಗಾಗಬೇಕು || ಹೀನನ ಕಂಡರೆ ಹಿಮ್ಮೆಟ್ಟಬೇಕು ಜ್ಞಾನಿಗಳ ಕಂಡರೆ ಕೈಮುಗಿಯಬೇಕು ಸ್ವಾಮಿ ಶ್ರೀಪುರಂದರವಿಟ್ಠಲರಾಯನ ನಾನಾ ಬಗೆಯಿಂದ ಕೊಂಡಾಡಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು