ಲಾಲಿಸಿದಳು ಮಗನ, ಯಶೋದೆ

ಲಾಲಿಸಿದಳು ಮಗನ, ಯಶೋದೆ

(ರಾಗ ಆರಭಿ ಆದಿತಾಳ) ಲಾಲಿಸಿದಳು ಮಗನ, ಯಶೋದೆ, ಲಾಲಿಸಿದಳು ಮಗನ |ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ || ಬಾಲಕನೆ ಕೆನೆಹಾಲು ಮೊಸರನೀವೆ ಲೀಲೆಯಿಂದಲಿ ಎನ್ನ ತೋಳಲಿ ಮಲಗೆಂದು || ಮುಗುಳುನಗೆಯಿಂದ ಮುದ್ದು ತಾ ತಾರೆಂದು ಜಗದೊಡೆಯನ ಶ್ರೀ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು