ಇರಬೇಕು ಇರದಿರಬೇಕು

ಇರಬೇಕು ಇರದಿರಬೇಕು

(ರಾಗ ಪೂರ್ವಿ ಆದಿತಾಳ) ಇರಬೇಕು ಇರದಿರಬೇಕು ||ಪ|| ಸಂಸಾರದಿ ಜನಕಾದಿ ರಾಜಋಷಿಗಳಂತೆ ||ಅ|| ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ ಮಿಥಿಲೇಶ "ಮಮ ಕಿಂಚಿನ್ನ ದಹ್ಯತೇ" ಎಂಬಂತೆ ಇರಬೇಕು || ದಧೀಚಿ ಋಷಿ ತನ್ನ ಅಸ್ಥಿ ಸುರರಿಗಿತ್ತು ಮಧುವೈರಿ ವೈಕುಂಠಪುರವಿತ್ತ ತೆರದಂತೆ ಇರಬೇಕು || ಪುರಂದರವಿಠಲನ್ನ ದಾಸರ ಸಂಗಡ ಪುತ್ರ ಮಿತ್ರ ಕಳತ್ರ ಬಂಧುಗಳಂತೆ ಇರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು