ಯಾವಾಗಲು ಚಿಂತೆ ಜೀವಕ್ಕೆ

ಯಾವಾಗಲು ಚಿಂತೆ ಜೀವಕ್ಕೆ

(ರಾಗ ಪಂತುವರಾಳಿ ಛಾಪುತಾಳ) ಯಾವಾಗಲು ಚಿಂತೆ ಜೀವಕ್ಕೆ ||ಪ|| ಈ ಜೀವ ಒಂದು ಪರಿಯಾಗೋ ತನಕ || ಹೆಂಡತಿಲ್ಲದ ಚಿಂತೆ , ಹೆಂಡತಿದ್ದರು ಚಿಂತೆ ಚಂಡಿ ಕುರೂಪಿಯಾದರು ಚಿಂತೆಯು ಕೊಂಡನಾಗಿ ಪೊತ್ತು ತಿರುಗುವ ಚಿಂತೆ ಭೂ- ಮಂಡಲದೊಳಗೆಲ್ಲ ಚಿಂತೆ ಕಾಣಣ್ಣ || ಓಲೆಗಿಲ್ಲದ ಚಿಂತೆ , ಓಲೆಗಾದರು ಚಿಂತೆ ಮೇಲೆ ಸಂಬಳ ಬಾರದ ಚಿಂತೆಯು ಸಾಲ ಕೊಡೋ ಚಿಂತೆ , ಸಾಲ ತೆಗೆಯೋ ಚಿಂತೆ ಮೂರ್ಲೋಕದೊಳಗೆಲ್ಲ ಚಿಂತೆ ಕಾಣಣ್ಣ || ಮನೆಯಿಲ್ಲದ ಚಿಂತೆ , ಮನೆಯಾದರು ಚಿಂತೆ ಮನೆಯ ವಾರ್ತೆ ನಡೆಯದ ಚಿಂತೆಯು ಮನಸಿಜನಯ್ಯ ಶ್ರೀ ಪುರಂದರವಿಠಲನ ನೆನೆದರೆ ಚಿಂತೆ ನಿಶ್ಚಿಂತೆ ಕಾಣಣ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು