ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮುವತ್ತೆರಡು ಕುಂಜರದಗಮನೆ ಕೋವಿದನರಸಿ || ಐದು ಮಾತಿನ ಮೇಲೆ ವೈದಿಕನೆಂಬರು ಐದು ದೀವಿಗೆ ಗಾಳಿ ಮುಸುಕಿತೆಂದು ಧೂಳಿಗೆ ಹಾರುವ ಮಣ್ಣ ಮೇಲೆ ಮುದ್ದೆಯ ಕಲಸಿ ಲೋಲನಾಗಿದು ಸೊಬಗಾದ ಬೆಡಗು || ಎರಡು ನಂದಿಯ ಹೂಡಿ ಗರುಡವಾಹನನಾಗಿ ಬರುತ ಭೋರಿಡುತ್ತಿದೆ ಅರಿಗೆ ಮೀರಿ ಹರಿದಾಸಕನಕನು ಹಾಕಿದ ಮುಂಡಿಗೆ ಸಿರಿಆದಿಕೇಶವನಾಣೆ ಬಲ್ಲವರು ಪೇಳಿ || ಮುಂಡಿಗೆ ಎಂದರೆ ಒಗಟು ಎಂದಿರಬಹುದು. ಸರಿಯಾಗಿ ಗೊತ್ತಿಲ್ಲಾ. ಇದರ ಅರ್ಥವು ನನಗೆ ತಿಳಿದಿಲ್ಲಾ. ಕನಕರೇ ಹೇಳಿದ ಹಾಗೆ ಬಲ್ಲವರು ಹೇಳಲಿ.
ದಾಸ ಸಾಹಿತ್ಯ ಪ್ರಕಾರ
ಬರೆದವರು