ದಯಮಾಡೋ ದಯಮಾಡೋ ರಂಗ

ದಯಮಾಡೋ ದಯಮಾಡೋ ರಂಗ

(ರಾಗ ಮಧ್ಯಮಾವತಿ ಆದಿತಾಳ ) ದಯಮಾಡೋ ದಯಮಾಡೋ , ರಂಗ ದಯಮಾಡೋ ನಿನ್ನಾ ದಾಸ ನಾನೆಂದು || ಹಲವು ಕಾಲದಿಂ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ || ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸರ್ವದಾ ತೋರಿ ಕರುಣ || ಕರಿರಾಜವರದನೆ ಕಾಮಿತಫಲದ ಪುರಂದರವಿಠಲ ಹರಿ ಸಾರ್ವಭೌಮನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು