ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ

(ರಾಗ ಪಂತುವರಾಳಿ ಅಟತಾಳ) ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ- ವಿಂದ ನೀನಲ್ಲದೆ ಇಹಪರವಿಲ್ಲ || ಪರರ ಬೇಡಿಪ್ಪಂತೆ ಗತಿಯಾಯಿತಲ್ಲ ನರರ ತುತಿಸಿ ನಾಲಿಗೆ ಬರಡಾಯಿತಲ್ಲ ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ ನರಗೆ ಪಾಮರಗೆ ಪಾಪದ ಪಂಜರಗೆ || ತನುವು ತನ್ನದಲ್ಲ ತನ್ನವರು ತನಗಿಲ್ಲ ಅನುಕೂಲವಿರುವಾಗ ಸತಿಸುತರೆಲ್ಲ ಅನುವು ತಪ್ಪಿ ಮನವು ತಲ್ಲಣಿಸುತಿರುವಾಗ ವನಜನಾಭ ನೀನಲ್ಲದೆ ಯಾರಿಲ್ಲ || ಮಾತಾಪಿತೃ ಬಂಧುಗಳು ಮುಂತಾಗಿ ಸಂ- ಪ್ರೀತಿಯೊಳಿರಲು ಮನ್ನಿಪರೈ ಎಲ್ಲ ಕಾತರನಾಗ್ಯಮ ಕೊಂಡೊಯ್ಯುತಿರುವಾಗ ಸಂ- ಗಾತ ಇನ್ನ್ಯಾರಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು