ಚಿತ್ತೈಸಿದ ವ್ಯಾಸರಾಯ

ಚಿತ್ತೈಸಿದ ವ್ಯಾಸರಾಯ

(ರಾಗ ಭೈರವಿ. ಅಟ ತಾಳ) ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ|| ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ ಸ್ವಾಮಿ ವ್ಯಾಸರಾಯ ಪೊರಟ ಪ್ರೇಮದಿ ಹರಿಪುರಕೆ ಹಾಟಕದ ಬೆತ್ತಕೋಟಿ ಸಾಟಿ ಇಲ್ಲದೆ ಪಿಡಿದು ನೀಟಾದ ಓಲಗದವರ ಕೂಟಗಳ ಮಧ್ಯದಲ್ಲಿ ಸಾಧು ವಿಪ್ರ ಜನರೆಲ್ಲ ವೇದ ಘೋಷಣೆಯ ಮಾಡೆ ನಾದವುಳ್ಳ ನಗಾರಿಯು ಭೇದಿಸಿತು ನಾಲ್ಕು ದಿಕ್ಕು ಹೇಮಮಯ ಪಿಡಿಯುಳ್ಳ ಚಾಮರಂಗಳನ್ನೆ ಪಿಡಿದು ಕಾಮಿನಿಮಣಿಯರ್ಕೆಲದಿ ಸ್ವಾಮಿಯೆಂದು ಬೀಸುತ್ತಿರೆ ಅರವಿಂದಾಸನನಯ್ಯ ಪುರಂದರವಿಠಲನು ಸಿರಿ ಸಹಿತದಿ ಬಂದು ಕರ ಪಿಡಿದೆತ್ತಿದ್ದು ಕಂಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು