ಗುರುವಿನ ಗುಲಾಮನಾಗುವ

ಪಲ್ಲವಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ಚರಣ: 1: ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ ಸಾರ ನ್ಯಾಯ ಕಥೆಗಳ ಕೇಳ್ದರಿಲ್ಲ ಧೀರನಾಗಿ ತಾ ಪೇಳಿದರಿಲ್ಲ 2:
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ರಂಗ ಬಂದ ಮನೆಗೆ

ಪಲ್ಲವಿ: ರಂಗ ಬಂದ ಮನೆಗೆ ಶೃಂಗಾರ ನೋಡಿರೋ ಹಿಂಗದಂಥ ಬಡತನ ಭಂಗವಾಗಿ ಹೋಯಿತೋ ಚರಣಗಳು: ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯದು ದಾನವಾಂತಕ ರಂಗ ಬರಲು ನಾನಾ ಪರಿಯ ಪಟ್ಟವಾಳಿ ತಾನೇ ಬಂದು ಮನೆಯೊಳು ನಿದಾನವಾಯಿತೋ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ರಂಗ ಕೊಳಲಲೂದಲಾಗಿ

ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ. ಪಲ್ಲವಿ: ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು ಚರಣ 1: ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಅಂಗನೆಯರೆಲ್ಲ ನೆರೆದು

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ

ಮಂಗಳ ನಾಮವ ಪಾಡಿ ರಂಗನ ಕುಣಿಸುವರು

 

ಚರಣ 1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ

ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

 

2:

ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ

ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

 

3:

ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ

ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ

ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಮೊದಲಿಗೆ ಈ ಹಾಡನ್ನು ನೋಡೋಣ:

ಕರುಣಿಸೋ ರಂಗಾ

ರಚನೆ - ಪುರಂದರದಾಸರು ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ|| ರುಕುಮಾಂಗದನಂತೆ ವ್ರತವ ನಾನರಿಯೆನೊ ಶುಕ ಮುನಿಯಂತೆ ಸ್ತುತಿಸಲು ಅರಿಯೆ ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೊ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆ ಚರಣ 1: ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು ಸಕಲ ರಾಯರುಗಳು ಸನ್ನದ್ಧರಾಗಿರೆ ರುಕುಮಿಣೀಯನು ತಂದು ವರಿಸಿ ಅಳಿದನಾಗಿ 2:
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಪಲ್ಲವಿ: ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ : ಅಂಬುಜನಾಭ ದಯದಿಂದ ಎನ್ನ ಮನೆಗೆ ಚರಣಗಳು: ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥವನೆಂಥವನೆ ರಂಗಯ್ಯ

ಪಲ್ಲವಿ: ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ ಚರಣ: ೧: ಆಗಮವನು ತಂದವನೆ ರಂಗ ಬೇಗದಿ ಗಿರಿಯ ಪೊತ್ತವನೆ ಮೂಗಿಂದ ಭೂಮಿಯನೆತ್ತಿದನೆ ಶಿಶು ಕೂಗಲು ಕಂಭದಿಂದೊದಗಿದನೆ ಕೃಷ್ಣ ೨: ಧರಣಿಯ ಈರಡಿ ಮಾಡಿದನೆ ಭೂ- ಸುರನಾಗಿ ಪರಶುವ ಧರಿಸಿದನೆ ಭರದಿ ಕೋಡಗ ಹಿಂಡ ಕೂಡಿದನೆ ಫಣಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ|| ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹಾವತಾರಗೆ ತರಳನ್ನ ಕಾಯ್ದಂಥ ನರಸಿಂಹಗೆ ||೧|| ಭೂಮಿಯ ದಾನವ ಬೇಡಿದವಗೆ ಆ ಮಹಾಕ್ಷತ್ರಿಯರ ಗೆಲಿದವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು