ಈತ ಮುಖ್ಯ ಪ್ರಾಣನಾಥ

ರಾಗ ಬೇಹಾಗ್/ಅಟ್ಟ ತಾಳ ಈತ ಮುಖ್ಯ ಪ್ರಾಣನಾಥ || ಪಲ್ಲವಿ || ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ || ಭಾನುವಿನ ತುಡಿಕಿದಾತ ಭಾರತಕೆ ಬಂದಾತ ವಾನರೋತ್ತಮ ಹನುಮ ಹರಿಶರಣನೀತ || ೧ || ವಾರಿಧಿಯ ನೆಗೆದಾತ ವನಚರಾಗ್ರೇಸರನೀತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ರಾಗ ಸೌರಾಷ್ಟ್ರ/ಅಟ್ಟ ತಾಳ ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ || ಏಳು ಶರಧಿಯು ಎನಗೆ ಏಳು ಕಾಲುವೆಯು ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ || ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ ಹ್ಯಾಗೆ ಬಿಟ್ಟರು ಹೇಳೊ ಕೋತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು.

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.

ಯುಗ ಯುಗಗಳಿಂದ ಗಾಢ-ಗೂಢವಾಗಿಯೇ ಉಳಿದ ಸಂಸ್ಕೃತದ ಮಹಾಮಂತ್ರಗಳನ್ನು, ಘನ ವಿಚಾರಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಹಾಡು ಹೇಳುವ ಸಂಪ್ರದಾಯವನ್ನು ಶ್ರೀಪಾದರಾಜರು ವ್ಯಾಪಕವಾಗಿ ಪ್ರಾರಂಭಿಸಿದರು.

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ

ಹರಿದಾಸರ ಮೂಲಸ್ಪೂರ್ತಿ ಪುರುಷ ಮಧ್ವಾಚಾರ್ಯರು. ಕೃಷ್ಣಾ ಎಂದು ಉಡುಪಿ ಶ್ರೀಕೃಷ್ಣನನ್ನು ತೋಳ್ತಕ್ಕೆಯಲ್ಲಿ ಬಿಗಿದಪ್ಪಿದ ಇವರ ಭಕ್ತಿಯನ್ನು ಕಂಡು ನಂತರದ ಹರಿದಾಸರೆಲ್ಲರೂ ಶ್ರೀಕೃಷ್ಣನ ಭಕ್ತಿಯೆಂಬ ಪ್ರೀತಿಯ ಮಹಾಪೂರವನ್ನೇ ಹರಿಸಿದರು.

ಕುಲ ಕುಲ ಕುಲವೆಂದು ಹೊಡೆದಾಡದಿರಿ

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ || ಪಲ್ಲವಿ || ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಕುಟಕಾಣಿಸ ಬಂದು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯಾ ಮನುಜ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾರಿ ಬಂದನೆ ಪ್ರಾಣೇಶ ಬಂದನೆ

ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ || ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು ಧೀರನು ವಯ್ಯಾರದಿಂದ || ಅನು ಪಲ್ಲವಿ || ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿರಯ್ಯ ಹನುಮಂತನ ಮಹಿಮೆಯ

ರಾಗ ಶಂಕರಾಭರಣ/ಚಾಪು ತಾಳ ನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ || ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ || ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂದನ ಕಾಣಿರೇನೆ ಗೋಪಿಯ ಕಂದ

ರಾಗ ಸಾವೇರಿ/ಚಾಪು ತಾಳ ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ || ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ || ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ || ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೆರಳಿದರು ಹರಿಪುರಕಿಂದು

ತೆರಳಿದರು ಹರಿಪುರಕಿಂದು || ಪಲ್ಲವಿ || ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ || ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ ಮುಕ್ತಿಗೈದಿದರು ಕೇಳಿ ಬುಧಜನರು || ೧ || ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ ಶರೀರವನಿರಿಸಿ ಅನಾಥರನು ಹರಿಸಿ || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು