ಆರು ಬದುಕಿದರಯ್ಯ (ಪುರಂದರದಾಸರದು)

ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ || ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ || ಕರಪತ್ರದಿಂದ ತಾಮ್ರಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧|

ಆವ ರೋಗವೊ ಎನಗೆ...

"ಇಲ್ಲಿ ಅಮೇರಿಕದಲ್ಲಿ ದೇವಸ್ಥಾನ ಎಂದು ಮಾಡಿ ಒಂದು ವೇದಿಕೆಯಲ್ಲಿ ಎಲ್ಲಾ ದೇವರ ಫೋಟೊಗಳನ್ನು, ಮೂರ್ತಿಗಳನ್ನೂ ಇಡುತ್ತಾರೆ. ಪೂಜೆ ಮಾಡುತ್ತಾರೆ. ಆದರೆ ಹೀಗೆ ಇಟ್ಟಿರುವದನ್ನು ನೋಡಿದರೆ ಇದು ದೇವಸ್ಥಾನ ಅನಿಸುವದೇ ಇಲ್ಲ. ಮೂರ್ತಿಗಳು ಆಹಿತ ಪ್ರತಿಮೆಗಳು, ಅವುಗಳಲ್ಲಿ ಅರ್ಚನೆಗೆ ತಕ್ಕಂತೆ ಅಧಿಷ್ಠಾನವಂತೆ. ಹೀಗೆ ಇಟ್ಟಿರುವ ಮೂರ್ತಿಗಳಲ್ಲಿ ಅಧಿಷ್ಠಾನ ಎಷ್ಟರ ಮಟ್ಟಿಗೆ ಇದ್ದೀತೋ!!"

ಇಂದಿನ ದಿನವೇ ಶುಭದಿನವು

ಇಂದಿನ ದಿನವೇ ಶುಭದಿನವು ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭಯೋಗ ಇಂದಿನ ಕರಣ ಶುಭ ಕರಣ ಇಂದು ಪುರಂದರ ವಿಟ್ಠಲ ರಾಯನ ಸಂದರ್ಶನ ಫಲವೆಮಗಾಯಿತು!

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ

೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ ೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ ೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ ೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ ೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ ೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ

ಹರಿದಾಸ ಸಂಪದ ಸಂಪುಟಕ್ಕೆ ಸ್ವಾಗತ!

ಒಂದು ಸಾಯಂಕಾಲ ಹಾಗೆಯೇ ಪುರಂದರ ದಾಸರ ರಚನೆಯೊಂದನ್ನು ಕುರಿತು ಹಂಸಾನಂದಿಯವರೊಂದಿಗೆ ಚರ್ಚೆ ಮಾಡುವಾಗ ವಿದ್ಯಾಭೂಷಣರ ಟ್ಯೂನು ಮಾತ್ರ ನೆನಪಾಗಿ ಅದರ ಸಾಹಿತ್ಯ ಸರಿಯಾಗಿ ನೆನಪಾಗದೆ ಬೇಸರವಾಯ್ತು. ಹಂಸಾನಂದಿಯವರು ತಕ್ಷಣ ಸಾಹಿತ್ಯ ಸರಿಪಡಿಸಿದರಲ್ಲದೆ ನಾನು ಪ್ರಸ್ತಾಪಿಸಿದ ಉಳಿದ ಕೆಲವು ರಚನೆಗಳನ್ನೂ ನನಗೆ ಥಟ್ಟನೆ ಆ ಕೂಡಲೆ ಓದಲು ಕೊಟ್ಟರು. ಹಂಸಾನಂದಿಯವರ ಆಸಕ್ತಿ ನೋಡಿ ಇವರ ಕುರಿತು ನನಗುಂಟಾದ ಆಶ್ಚರ್ಯ, ಗೌರವ ಈ ವೆಬ್ಸೈಟನ್ನು ಹುಟ್ಟು ಹಾಕಿಸಿದೆ. ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಸಂಪದದಲ್ಲಿ ಬರೆಯುತ್ತ ಬರುತ್ತಿರುವ ಹಂಸಾನಂದಿಯವರ ನೇತೃತ್ವದಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ. ಯೋಜನೆಯಲ್ಲಿ ನೀವೂ ಪಾಲ್ಗೊಳ್ಳಬಹುದು! ಹೆಚ್ಚಿನ ಮಾಹಿತಿ ನಿರೀಕ್ಷಿಸಿ, ಈ ಪುಟ ನೋಡುತ್ತಿರಿ!