ಕರುಣಿಸೋ ರಂಗಾ

ಕರುಣಿಸೋ ರಂಗಾ

ರಚನೆ - ಪುರಂದರದಾಸರು ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ|| ರುಕುಮಾಂಗದನಂತೆ ವ್ರತವ ನಾನರಿಯೆನೊ ಶುಕ ಮುನಿಯಂತೆ ಸ್ತುತಿಸಲು ಅರಿಯೆ ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೊ ||೧|| ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲು ಅರಿಯೆ ಕರಿರಾಜನಂತೆ ವರ ಕಪಿಯಂತೆ ದಾಸ್ಯವ ಮಾಡಲರಿಯೆ ಸಿರಿಯಂತೆ ನೆರೆದು ಮೋಹಿಸಲರಿಯೆನೊ ||೨|| ಬಲಿಯಂತೆ ದಾನವ ಕೊಡಲು ಅರಿಯೆನೊ ಭಕ್ತಿ ಛಲವನರಿಯೆ ಪ್ರಹ್ಲಾದನಂತೆ ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಠಲ ||೩| ___________________________
ದಾಸ ಸಾಹಿತ್ಯ ಪ್ರಕಾರ
ಬರೆದವರು