ಸಂಗೀತ

ಅಂಗನೆಯರೆಲ್ಲ ನೆರೆದು

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ

ಮಂಗಳ ನಾಮವ ಪಾಡಿ ರಂಗನ ಕುಣಿಸುವರು

 

ಚರಣ 1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ

ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

 

2:

ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ

ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

 

3:

ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ

ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ

ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಮೊದಲಿಗೆ ಈ ಹಾಡನ್ನು ನೋಡೋಣ: