ರಂಗ

ರಂಗ ಬಂದ ಮನೆಗೆ

ಪಲ್ಲವಿ: ರಂಗ ಬಂದ ಮನೆಗೆ ಶೃಂಗಾರ ನೋಡಿರೋ ಹಿಂಗದಂಥ ಬಡತನ ಭಂಗವಾಗಿ ಹೋಯಿತೋ ಚರಣಗಳು: ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯದು ದಾನವಾಂತಕ ರಂಗ ಬರಲು ನಾನಾ ಪರಿಯ ಪಟ್ಟವಾಳಿ ತಾನೇ ಬಂದು ಮನೆಯೊಳು ನಿದಾನವಾಯಿತೋ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ರಂಗ ಕೊಳಲಲೂದಲಾಗಿ

ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ. ಪಲ್ಲವಿ: ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು ಚರಣ 1: ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಬಾರೋ ನಮ್ಮ ಮನೆಗೆ

ಪಲ್ಲವಿ: ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ

 

ಚರಣ:

1: ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ

2: ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು

3: ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ

4: ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು ಮೇರೆಯಿಲ್ಲದೆ ಕೈಯ ತೋರೆಂದ ಶ್ರೀ ಕೃಷ್ಣ

5: ಅಂಗನೆಯರ ವ್ರತ ಭಂಗವ ಮಾಡಿದ ರಂಗ ವಿಟ್ಠಲ ಭವಭಂಗ ಪರಿಹರಿಸೋ

ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡೋ ರಂಗ

ಪಲ್ಲವಿ ದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿ ಅನುಪಲ್ಲವಿ ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ಚರಣಳು: ಇಹ ಪರ ಗತಿ ನೀನೇ ಇಂದಿರ ರಮಣ ಸಹಾಯ ನಿನ್ನದೆ ಸರ್ವದಾ ತೋರಿ ಕರುಣ ಕರಿರಾಜ ವರದನೇ ಕಾಮಿತ ಫಲದ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ