ವೈದ್ಯನ ನಾನರಿಯೆ
( ರಾಗ ಸುರುಟಿ ಅಟತಾಳ)
ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ||
ಭವರೋಗಕೆ ಬಂಧು ನೀನೆ ||ಅ||
ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು
ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ ||
ಹರಿ ನಿಮ್ಮ ಶರಣವೆಂಬ ರಸದಲಿ ಚರಣಧ್ಯಾನವಿತ್ತು
ಗುರುತರ ಮಾತ್ರೆಗಳೆನಗೆ ಕೊಟ್ಟು ದುರಿತ ಪಾರುಗೆಯ್ವ ಬಂಧು ನೀನಲ್ಲದೆ ||
ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ
ಘನ್ನ ಶ್ರೀಪುರಂದರವಿಠಲರಾಯನೆ ಎನ್ನ ದುರಿತವ ಹರಿಸುವನಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments