ನೋಡಬಾರದು ಎಂದಿಂದಿಗೂ
(ರಾಗ ಖಮಾಸ್ ಆದಿತಾಳ )
ನೋಡಬಾರದು ಎಂದಿಂದಿಗೂ ನೋಡಬಾರದು
ಈ ಮೂರ್ಖನ್ನ ಈ ಘಾತಕನ ಈ ಪಾಪಿಯ ||ಪ||
ನೋಡಿದರೆ ಸೂರ್ಯನ್ನ ನೋಡಿ
ಪರಮಾತ್ಮನ ಸ್ಮರಿಸಬೇಕು ||ಅ||
ಅಶ್ರದ್ಧೆಯಿಂದ ಹರಿಚಿಹ್ನೆ ಇಲ್ಲದವರ
ವಿಶ್ವಾಸಘಾತಕ ವೇಷಧಾರಿಯರ
ಪಶ್ವಾದಿ ವರ್ತನವು ಉದ್ಯೋಗಬ್ರಹ್ಮಜೀವರೈಕ್ಯವೆಂಬರ
ಶಾಸ್ತ್ರ ಏಕ ಪ್ರಕಾರ ನಾ ಶಕ್ತನೆಂದು ತಿಳಿದವರ ||
ತುಲಸಿಯಿಲ್ಲದ ಮನೆ ತುಷ್ಟಿಯಿಲ್ಲದ ವಿಪ್ರ
ಜಲಜನಾಭನ ಸತತ ಸ್ಮರಿಸದವರ
ಸಲೆ ನಿಜ ಸತ್ಕರ್ಮ ಇಲ್ಲದಂಥವರ
ಶ್ರೀಲೋಲ ಪರನೆಂದು ತಿಳಿಯದವರ ||
ಸಾಲಿಗ್ರಾಮ ಸುದರ್ಶನ ಚಕ್ರಾಣಿಕೆ ರಹಿತವಾಗಿ
ಮೂಲಮಂತ್ರ ಪ್ರತಿಮೆ ಇಲ್ಲದ ಮೂರ್ತಿಯ ಪೂಜೆ
ಸಾಲ ಮಾಡಿ ಅಂಜದವರ ಸಜ್ಜನರ ದೂಷಿಸುವರ
ಅಲಸದೆ ಸಿಟ್ಟು ಬಿಡದೆ ಇಹರನ್ನ ||
ಅತ್ತೆ ಮಾವರ ಸೇವೆ ಮಾಡದೆ ಪತಿಗೆ ಅಂಜದವಳ ಉ-
ನ್ಮತ್ತ ಸ್ತ್ರೀಯಳ ನಿಷ್ಠೂರ ಮಾತನಾಡುವಳ
ಉತ್ತಮ ಮಧ್ಯಮ ನೀಚವ ತಿಳಿಯದವರ
ಚಿತ್ತದಲ್ಲಿ ಕ್ರೋಧವಿಟ್ಟು ಮತ್ತು ಮಾತನಾಡುವರ ||
ಅತ್ಯಂತ ಭೇದವಾದ ಶ್ರೀಮದಾನಂತರೂಪಗಳಿಗೆ
ಪ್ರತ್ಯೇಕ ಗುಣಗಳನು ಹೇಳುವ ಬ್ರಹ್ಮರನ್ನ
ಸತ್ಯವೆಲ್ಲ ಮಿಥ್ಯವೆಂಬೊ ಸ್ವಾಮಿದ್ರೋಹಿಗಳ
ಸತ್ಯವಾದ ಪುರಂದರ ವಿಠಲನ್ನ ಸ್ಮರಿಸದವರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments