ನಿನ್ನ ಮಗನ ಗಾಳಿ ಘನವಮ್ಮ

ನಿನ್ನ ಮಗನ ಗಾಳಿ ಘನವಮ್ಮ

(ರಾಗ ಬಿಲಹರಿ ಛಾಪುತಾಳ ) ನಿನ್ನ ಮಗನ ಗಾಳಿ ಘನವಮ್ಮ ಕರೆದು ರಂಗಗೆ ಬುದ್ಧಿ ಪೇಳೆ ಗೋಪ್ಯಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ಕೋಲತಂದು ಕೊಲ್ಲಪೋದರೆ ಅಮ್ಮ ಲೀಲೆಯಿಂದ ಓಡಿ ಪೋದನಮ್ಮ || ಮೊಸರು ಕಡೆವಲ್ಲಿ ಇವನ ಗಾಳಿ ಘನವಮ್ಮ ಶಿಶುವಿನ ಕೈಲಿ ಬೆಣ್ಣೆ ಉಳಿಗೊಡನಮ್ಮ ಮೊಸರು ಮಾರುವರು ಮೊರೆಯಿಡುವರಮ್ಮ ಶಶಿಮುಖಿಯರು ಹೀಗೆ ದೂರುವರಮ್ಮ || ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ ಈರೇಳು ಲೋಕಕ್ಕೆ ಒಡೆಯ ತಾನಂತೆ ಧೀರ ಶ್ರೀಪುರಂದರವಿಟ್ಠಲರಾಯನ ಕೇರಿ ಬಸವನ ಮಾಡಿ ಬಿಟ್ಟೆ ಗೋಪ್ಯಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು