ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ

(ರಾಗ ಕಾಂಭೋಜ ಅಟತಾಳ) ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ ||ಪ|| ಕೇಡಿಗನು ಇವ ನಮ್ಮ ಕೆಲಸ ಕೆಡಿಸುವನೆಂದು ||ಅ|| ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನೆಂದು ಅನ್ನಿಗರ ಬಿಡುವನೆ ಎಂದೆಲ್ಲರ್ ಮಾತಾಡಿಕೊಂಡು || ಹಸಿದಳುತಿರೆ ನೇವರಿಸಿ ಮೊಲೆಯೂಡಿದವಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಲಿಗೆ ಬಿದ್ದೆನೊ ಕೈಯ ಬಿಡೊ

(ರಾಗ ಶಾಮಕಲ್ಯಾಣಿ ಛಾಪುತಾಳ) ಕಾಲಿಗೆ ಬಿದ್ದೆನೊ ಕೈಯ ಬಿಡೊ ಬಾಳು ಬದುಕು ಮುತ್ತೈದಾಗಿ ||ಪ|| ಅಧರ ಚುಂಬಿಸದಿರೊ ರಂಗಯ್ಯ ಅಧರ ಸವಿಯೆಂದು ಸವಿದೆನೆ || ಎದೆಯ ಮುಟ್ಟದಿರೊ ಎಲೊ ರಂಗ ಅದು ಮರದ ಮೊಗ್ಗೆಂದು ಪಿಡಿದೆನೆ || ಅತ್ತೆ ಕಂಡರೆ ರಚ್ಚೆನಿಕ್ಕೋಳು , ಅವ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾರುಣ್ಯಮೂರುತಿಯೆ ( ಹರಿಹರ ಸ್ತೋತ್ರ)

(ರಾಗ ಮುಖಾರಿ ಆದಿತಾಳ) ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ದೊರೆಯೆ ||ಪ|| ಧಾರಿಣಿಯೊಳು ನಿನಗೆಣೆಯೆ ಗುರುದೇವ ಶಿಖಾಮಣಿಯೆ ||ಅ|| ಗುಹಾಸುರ ಮರ್ದನನೆ ದೇವ ಖಗ ವೃಷವಾಹನನೆ ಗಜಚರ್ಮ ಪೀತಾಂಬರನೆ ಮಹಾದೇವ ಮಾಧವನೆ || ತ್ರಿಪುರಾವಳಿ ಸಂಹಾರನೆ ತ್ರೈಲೋಕ್ಯ ಪಾವನನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಣದಿರಲಾರೆ ಪ್ರಾಣಕಾಂತನ

(ರಾಗ ಮಣಿರಂಗು ಅಟತಾಳ ) ಕಾಣದಿರಲಾರೆ ಪ್ರಾಣಕಾಂತನ ವೇಣುನಾಥನ ತೋರಿಸೆ ||ಪ|| ಜಾಣೆ ಕೃಷ್ಣನು ಕೊಳಲನೂದುತ ಕಾಣದೆಲ್ಲಿಗೆ ಪೋದನೆ ||ಅ|| ಗೋಕುಲದಲ್ಲಿ ಆಕಳ ಕಾಯುವ ಸಕಲ ಸುರಮುನಿಸೇವ್ಯನ ವ್ಯಾಕುಲಾಂತಕ ಲೋಕನಾಯಕ ಲಕುಮಿನಲ್ಲನ ತೋರಿಸೆ || ಹತ್ತು ಆರು ಸಾವಿರ ಸತಿಯರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ

( ರಾಗ ಧನಶ್ರೀ , ಅಟತಾಳ) ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ|| ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ|| ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ಗೀರುಗಂಧವ ಹಚ್ಚಿ ಹಾರವ ಹಾಕಿ ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡೀ ಬಾರೆನ್ನುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಾನಿಧಿಯೆ ಈಶ ( ರುದ್ರದೇವರ ಸ್ತೋತ್ರ)

( ರಾಗ ಮುಖಾರಿ ಆದಿತಾಳ) ಕರುಣಾನಿಧಿಯೆ ಈಶ ಅರುಣಗಿರಿಯ ವಾಸ ||ಪ|| ಮುರನವೈತ್ರಿಯ ಚರಣದಾಸ ಅರುಣರವಿಯ ಕೋಟಿಪ್ರಕಾಶ ||ಅ|| ಭಸ್ಮಧೂಳಿತ ಸರ್ವಾಂಗ ಮತ್ತೆ ತಲೆಯೊಳಿಪ್ಪ ಗಂಗಾ ವಸ್ತ್ರರಹಿತ ದಿಗಂಬರ ಲಿಂಗ ಕಸ್ತೂರಿರಂಗನ ಪಾದದ ಭೃಂಗ || ಮತ್ತೆ ತ್ರಿಪುರಸಂಹಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರೆದು ಮುದ್ದಿಸುವ ಗೋಪಿಯ ಭಾಗ್ಯ

(ರಾಗ ಕೇದಾರಗೌಳ ತ್ರಿಪುಟತಾಳ) ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ|| ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ|| ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು ನವ್ಯಸುಧಾಂಗುಲಿ ಸವಿಯುತಲಿ ಅವ್ಯಕ್ತಮಧುರೋಕ್ತಿಗಳಿಂದಲಾಡುವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಮಲ ಕೋಮಲ ಕರತಲಲಾಲಿತ

(ರಾಗ ಸೌರಾಷ್ಟ್ರ ತ್ರಿಪುಟತಾಳ ) ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧|| ನಂದನಂದನ ಯದುಕುಲವಂದ್ಯನೆ ಇಂದುವದನ ನೀ ದಾರೈ ಕೃಷ್ಣ ಮಂಜುಳಭಾಷಿಣಿ ಕುರವಕಗಂಧಿನಿ ಕಂಜನಾಭನೆ ಬಾಲೇ ನಾನು || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

(ರಾಗ ಸುರುಟಿ ಆದಿತಾಳ) ಮಂಗಳಂ ಜಯ ಮಂಗಳಂ ||ಪ|| ಗೋಪಗೋಪೀಸುತಗೆ ಗೋವಳರಾಯಕೆ ಗೋವರ್ಧನೋದ್ಧರ ಗೋವಿಂದಗೆ ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ ಗೋಪಾಲಕೃಷ್ಣನ ಶ್ರೀಪಾದಕ್ಕೆ || ಭಕ್ತಜನ ಪಾಲಿಪಗೆ ಭವರೋಗವೈದ್ಯಗೆ ಅಚ್ಯುತಾನಂತ ಆದಿಪುರುಷಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ||ಪ|| ಸಾಗರದೊಳಾಡುವ ಮತ್ಸ್ಯನಿಗೆ ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ವೇಗದಿಂದಲಿ ಭೂಮಿಯ ತಂದ ವರಹಗೆ ಕೂಗಿದ ಶಿಶುಪರಿಪಾಲನಿಗೆ || ವಾಸವಾನುಜ ಪರಶುವರಾಯುಧ ದಾಶರಥಿ ರಾಮಚಂದ್ರನಿಗೆ ಸಾಸಿರದ್ಹರಿನಾರುನೂರೆಂಟು ಹೆಂಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು