ಕರೆದು ಮುದ್ದಿಸುವ ಗೋಪಿಯ ಭಾಗ್ಯ

ಕರೆದು ಮುದ್ದಿಸುವ ಗೋಪಿಯ ಭಾಗ್ಯ

(ರಾಗ ಕೇದಾರಗೌಳ ತ್ರಿಪುಟತಾಳ) ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ|| ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ|| ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು ನವ್ಯಸುಧಾಂಗುಲಿ ಸವಿಯುತಲಿ ಅವ್ಯಕ್ತಮಧುರೋಕ್ತಿಗಳಿಂದಲಾಡುವ ಭವ್ಯಮೂರುತಿ ಕೃಷ್ಣ ಪರಮಪುರುಷನೆಂದು || ಒಂದು ಕುಚವನುಣುತ ಮತ್ತೊಂದು ಕುಚವ ಹಿಡಿದು ಸಂದಿಸಿ ಮೊಗವನಾಲೋಕಿಸುತ ಚಂದದಿ ಕಿರುನಗೆಯಿಂದ ಬೊಮ್ಮಾಂಡವ ಅಂದು ಬಾಯೊಳು ತೋರ್ದ ಕೃಷ್ಣ ತಾ ಬಾರೆಂದು || ಆನೆ ಬಂತೆಂದಾನೆ ಎನಲು ತೊಡೆಯಲ್ಲಿ ನಿನೀಟಿಸೆ ಲೋಕಂಗಳು ಬೆರಗಾಗುತ ಜ್ಞಾನನಿಧಿಯೆ ಗುರುಪುರಂದರವಿಠಲ ಇ- ದೇನೊ ನಿನ್ನ ಮಹಿಮೆ ನಾನೇನರಿಯೆನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು