ಮಲಗಿ ಪಾಡಿದರೆ ಕುಳಿತು ಕೇಳುವನು

ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು ತನು ಶುದ್ಧಿಯಿಲ್ಲದವಗೆ ತೀರ್ಥ ಫಲವೇನು ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಪ್ಪು ಸಾಸಿರಗಳ ಒಪ್ಪಿ ಕಾಯೋ ಕೃಪಾಳು

ತಪ್ಪು ಸಾಸಿರಗಳ ಒಪ್ಪಿ ಕಾಯೋ ಕೃಪಾಳು | ಮುಪ್ಪುರವನಳಿದಂಥ ಮುನೀಂದ್ರ ವಂದ್ಯ | ಅಪ್ರಮೇಯನೆ ನಿನ್ನ ಅದ್ಭುತ ಮಹಿಮೆಗಳ | ಅಪ್ಪು ನಿಧಿಯಲಿ ಪುಟ್ಟಿದವಳರಿಯಳು | ಕಪ್ಪು ಮೇಘ ಕಾಂತಿಯೊಪ್ಪುವ ತಿಮ್ಮಪ್ಪ | ಅಪ್ರಾಕೃತರೂಪ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ | ನಿನ್ನನೆ ಬೇಡಿ ಬೇಸರಿಸುವೆ | ನಿನ್ನ ಕಾಲನು ಪಿಡಿವೆ ನಿನ್ನ ಹಾರೈಸುವೆ | ನಿನ್ನ ತೊಂಡರಿಗೆ ಕೈ ಕೊಡುವೆ || ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ | ಘನ್ನ ಪುರಂದರವಿಠಲ ದೇವರ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂತತಿ ಆಹೋದು ರಾಮಾಯಣವ ಕೇಳಲು

ಸಂತತಿ ಆಹೋದು ರಾಮಾಯಣವ ಕೇಳಲು | ಸಕಲ ಪಾಪಹರವು ಭಾರತ ಕೇಳಲು | ತಂತುಮಾತ್ರ ವಿಷ್ಣುಪುರಾಣವ ಕೇಳಲು | ತತ್ವ ವಿವೇಕವು ಬಾಹೋದು || ಅಂತರವರಿತು ಭಾಗವತ ಕೇಳಲು | ಆಹೋದಗ್ರ್ಯನಾ ಭಕ್ತಿ ವೈರಾಗ್ಯವು | ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು | ಸಕಲವು ಬಾಹೋದು ಸಾಯುಜ್ಯವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾರುವನ್ನ ಹೆಟ್ಟಬೇಕು

ಹಾರುವನ್ನ ಹೆಟ್ಟಬೇಕು | ಹಾರುವನ್ನ ಕುಟ್ಟಬೇಕು | ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು || ಹಾರುವನು ಪರಧನ ಪರಸತಿ ವಶನಾಗಿ ಊರವೊಳಗೆ ಆರು ಮಂದಿ ಹಾರುವಾರು | ಮೈದಾರಹಾರ ತಂದೆ ( ಮೈದಾರ ಹಾರದಂತೆ? ) ಮಾಡು ಎನ್ನ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾಡಿದರೆ ಎನ್ನೊಡೆಯನ ಹಾಡುವೆ

ಹಾಡಿದರೆ ಎನ್ನೊಡೆಯನ ಹಾಡುವೆ | ಬೇಡಿದರೆನ್ನೊಡೆಯನ ಬೇಡುವೆ | ಒಡೆಯಗೆ ಒಡಲನು ತೋರುತ | ಎನ್ನ | ಬಡತನ ಬಿನ್ನಹ ಮಾಡುವೆ| ಒಡೆಯ ಶ್ರೀ ಪುರಂದರವಿಠಲರಾಯನ | ಅಡಿಗಳನು ಬದುಕುವೆ, ಸೇರಿ ಬದುಕುವೆ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ

ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ | ಜೀವಕ್ಕೆ ಎಂದೆಂದಿಗು ತನುಗಳು ಕೊರತಿಲ್ಲ | ಸಾವು ಹುಟ್ಟು ಎಂಬೊ ಸಹಜ ಲೋಕದೊಳಗೆ | ಕಾಲಕಾಲದಿ ಹರಿ ಕಲ್ಯಾಣಗುಣಗಳ ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು | ಆಯಸ್ಸು ಎಂಬೊ ರಾಸಿ ಅಳೆದು ಹೋಗದ ಮುನ್ನ | ಹರಿಯ ಭಜಿಸಬೇಕು, ಮನಮುಟ್ಟಿ ಭಜಿಸಿದರೆ | ತನಕಾರ್ಯವು ಘಟ್ಟಿ || ಹಾಗಲ್ಲದಿದ್ದರೆ ತಾಪತ್ರಯ ಬೆನ್ನಟ್ಟಿ ವಿಧಿಯೊಳು ಗೆಯ್ವಾಗ ಹೋಗದಯ್ಯ ಕಟ್ಟಿ ಪುರಂದರವಿಠಲನ ಕರುಣಾ ದೃಷ್ಟಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಮಂಗಳಂ ನಿತ್ಯ ಶುಭ ಮಂಗಳಂ

( ರಾಗ ಭೈರವಿ ಅಟತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ದುರುಳ ತಮವನು ಕದ್ದು ಪಾತಾಳದಲಿ ಇರಲವನ ಕೊಂದು ವೇದಾವಳಿಗಳ ಸರಸಿಜೋದ್ಭವಗಿತ್ತು ಸುರಮುನಿಗಳನೆಲ್ಲ ಪೊರೆವ ಶ್ರೀ ಮಚ್ಛಾವತಾರ ಹರಿಗೆ || ಸುರರು ದೈತ್ಯರು ಕೂಡಿ ಸಿಂಧುವನು ಮಥಿಸುತಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು