ಪಂಥ ಬೇಡಿ ಪ್ರಾಣಿಗಳಿರ

(ಉದಯರಾಗ ಆದಿತಾಳ) ಪಂಥ ಬೇಡಿ ಪ್ರಾಣಿಗಳಿರ ||ಪ|| ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ|| ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ ನುಡಿ ಹರಿಯ ಕೀರ್ತನೆ ಒಡನೆ ಮಾಡಿ ಕಡುಸ್ನೇಹದಲ್ಲಿ ಕರವ ಪಾದಕಮಲದಲಿಟ್ಟು ಬಿಡದೆ ಸೇವೆಯ ಮಾಡೋ ಚಿತ್ತವಲ್ಲಿಡೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಗ್ರಾಮದಲಿ ವಾಸ

(ರಾಗ ಮುಖಾರಿ ಅಟತಾಳ) ಈ ಗ್ರಾಮದಲಿ ವಾಸ ಇರುವುದೆ ಪ್ರಯಾಸ ||ಪ|| ಹೊನ್ನು ಹಣಗಳು ಇಲ್ಲ ಇರುವುದಕೆ ಸ್ಥಳವಿಲ್ಲ ತನ್ನವರು ತನಗೆ ಎಂಬವರು ಇಲ್ಲ ಬೆನ್ನು ತೊಕ್ಕಂಬದಕೆ ಮತ್ತೆ ಸೋದರರಿಲ್ಲ ಇನ್ನಿಲ್ಲಿ ಇಹವಿಲ್ಲ ಪರವಿಲ್ಲವಲ್ಲ || ದುಡುಕಿ ಕೆಡಕನಿಗೂರು ಒಡವೆವುಳ್ಳವಗೂರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಮಾಡಲಿ ಮಗುವಿಗೆ ಏನಾಯಿತೆ

(ರಾಗ ಬಿಲಹರಿ ಝಂಪೆತಾಳ) ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ- ರಾಗಮವ ಬಲ್ಲವರು ತಿಳಿದು ಪೇಳಿ ||ಪ|| ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ || ರೋಗವಿದೇನು ದಾಡೆಯಲಿ ನೀರು ಇಳಿವುತದೆ ಕೂಗುವ ಧ್ವನಿ ಒಮ್ಮೆ ಕುಂದಿದುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದಾ ಹರಿ ಗೋವಿಂದಾ

(ರಾಗ ಹುಸೇನಿ ಅಟತಾಳ) ಗೋವಿಂದಾ ಹರಿ ಗೋವಿಂದಾ ||ಪ|| ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ || ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ ಎತ್ತೆತ್ತೋರುವೆ ಎನ್ನ ಕರ್ತು ವಿಚಾರಿಸೊ || ಸುರನರರಿಗೆಲ್ಲ ನೀನೇ ಗತಿಯೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ, ಜಯ ಜಾನಕೀಕಾಂತ

(ರಾಗ ನಾಟ ಆದಿತಾಳ) ಜಯ ಜಯ ||ಪ|| ಜಯ ಜಾನಕೀಕಾಂತ ಜಯ ಸಾಧುಜನವಿನುತ ಜಯತು ಮಹಿಮಾನಂತ ಜಯಭಾಗ್ಯವಂತ ||ಅ|| ದಶರಥನ ಮಗ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮ ಸಾಹಸಶಿಕ್ಷ ಅಂಬುಜದಳಾಕ್ಷ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಗದಂತರ್ಯಾಮಿಯೆನ್ನ ಸ್ವಾಮಿ

(ರಾಗ ಆನಂದಭೈರವಿ ಆದಿತಾಳ) ಜಗದಂತರ್ಯಾಮಿಯೆನ್ನ ಸ್ವಾಮಿ ||ಪ|| ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ|| ಜಗತುಕರ್ತು ನೀನಿರಲು ಅನ್ಯರನ್ನೆ ದೈವವೆಂದು ಬಗೆವವ ಜಗದೊಳಗೆ ಸ್ವರ್ಣಸ್ತೇಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ

(ರಾಗ ಕಾಂಭೋಜ ಅಟತಾಳ) ಇಬ್ಬರ್ಹೆಂಡಿರ ಸುಖವು ಇಂದು ಕಂಡೆನಯ್ಯ ||ಪ|| ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||ಅ|| ಒಬ್ಬಳಲಿ ಪೋಗಿ ಪೋಗರವ ಮಾಡೆನ್ನಲು ಬೊಬ್ಬೆ ಏನಿದು ಕೊಬ್ಬೆ? ನಡೆ ಎಂದಳು ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು ಅಬ್ಬಾ ಬಿಸಿ ಮುಟ್ಟಲಾಪೆನೆ ಎಂದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ

(ರಾಗ ಹಿಂದುಸ್ಥಾನಿ ಕಾಪಿ ಆದಿತಾಳ ) ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ|| ಮಂಗಳಂ ಮಂಗಳಂ ಕವಿಜನಗೇಯಗೆ ||ಅ|| ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ ಮುದದಿಂದ ವಾರಿಧಿಯ ಲಂಘಿಸಿ ಲಂಕೆಯ ಸುಟ್ಟವಗೆ ಪದುಮಾಕ್ಷಿ ಜಾನಕಿಯ ನೋಡುತ ಮೋದವ ಪಟ್ಟವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡುವ ಕರ್ತು ಬೇರೆ

(ರಾಗ ಸುರುಟಿ ಆದಿತಾಳ) ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ|| ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ|| ಜನನವಾಗದ ಮುನ್ನ ಜನನಿಯ ತನುವಿನೊಳಗೆ ಪಾಲ ಜನನವಾದ ಬಳಿಕ ಜನನಿಯ ಮೊಲೆಯ ತುಳಿಯ ತುಳಿ- ಯುಣಿಸುತ ಬೆಳೆಸುವ ಜನವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಟ್ಟಸಾಲವ ಕೊಡದೆ

(ರಾಗ ಕೇದಾರಗೌಳ ಝಂಪೆತಾಳ) ಕೊಟ್ಟಸಾಲವ ಕೊಡದೆ ಭಂಡಾಟ ಮಾಡುತಾನೆ ||ಪ|| ಎಷ್ಟು ಬೇಡಿದರೆನ್ನ ಪೋಯೆನ್ನುತಾನೆ ||ಅ|| ಭರದಿ ಕೇಳಲು ಜಲದಿ ಕಣ್ಣು ಬಾಯ ಬಿಡುತಾನೆ ತರುಬಿ ಕೇಳಲು ಕಲ್ಲು ಹೊತ್ತೈತಾನೆ ಉರುಬಿ ಕೇಳಲು ಊರು ಅಡವಿಯೊಳಗಿರುತಾನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು