ಕಾಣದಿರಲಾರೆ ಪ್ರಾಣಕಾಂತನ

ಕಾಣದಿರಲಾರೆ ಪ್ರಾಣಕಾಂತನ

(ರಾಗ ಮಣಿರಂಗು ಅಟತಾಳ ) ಕಾಣದಿರಲಾರೆ ಪ್ರಾಣಕಾಂತನ ವೇಣುನಾಥನ ತೋರಿಸೆ ||ಪ|| ಜಾಣೆ ಕೃಷ್ಣನು ಕೊಳಲನೂದುತ ಕಾಣದೆಲ್ಲಿಗೆ ಪೋದನೆ ||ಅ|| ಗೋಕುಲದಲ್ಲಿ ಆಕಳ ಕಾಯುವ ಸಕಲ ಸುರಮುನಿಸೇವ್ಯನ ವ್ಯಾಕುಲಾಂತಕ ಲೋಕನಾಯಕ ಲಕುಮಿನಲ್ಲನ ತೋರಿಸೆ || ಹತ್ತು ಆರು ಸಾವಿರ ಸತಿಯರ ವತಿ ಅಳಿಸಿದ ಭೂಪನ ಸಂತತ ಅವನ ಸ್ತುತಿಸಿದವರಿಗೆ ಅತಿಶಯಂಗಳ ಕೊಡುವನ || ನಾರಿ ಸಭೆಯೊಳು ಸೀರೆ ಸೆಳೆಯಲು ವಾರಿಜಾಕ್ಷನ ನೆನೆಯಲು ಮಾರನಯ್ಯ ಶ್ರೀಕರುಣಾಸಾಗರ ನಾರಿಗೆ ಅಕ್ಷಯವಿತ್ತನೆ || ಗಂಗೆಜನಕ ಮುರಾರಿ ಶ್ರೀಧರ ಮಂಗಳಾಂಗ ಗೋವಿಂದನ ರಂಗನಾಥ ಮಾತಂಗವರದ ಭು- ಜಂಗಶಯನ ಶ್ರೀ ಕೃಷ್ಣನ || ಇಂದುಮುಖಿ ಕೇಳೆನ್ನ ಬಿನ್ನಪ ಇಂದು ಕರಗಳ ಮುಗಿವೆ ನಾ ಇಂದು ಪುರಂದರವಿಠಲರಾಯನ ಮಂದಗಮನೆ ನೀ ತೋರಿಸೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು