ಕೊಂಡಾಡಲಳವೆ ನಿನ್ನಯ ಕೀರ್ತಿ

ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳಗೆ ಹಯಗ್ರೀವ ಮೂರ್ತಿ| ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ| ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ|| ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ- ಪರಶು ಹಿಡಿಯ ಬಾಹುಜರ ಕಿತ್ತೆ|
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಣಿ ಮಾಧವನ ತೋರಿಸೆ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ|| ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ|| ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೇವಕನೆಲೊ ನಾನು

ಸೇವಕನೆಲೊ ನಾನು ನಿನ್ನಯ ಪಾದ ಸೇವೆ ನೀಡೆಲೊ ನೀನು ||ಪಲ್ಲವಿ|| ಸೇವಕನೆಲೊ ನಾನು ಸೇವೆ ನೀಡೆಲೊ ನೀನು ಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನು ಗೋವರ್ಧನಧರ ದೇವ ಗೋವುಗಳ ಕಾವ ಶ್ರೀ ಮಹಾನುಭಾವ ವರಗಳನೀವ ದೇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದು ಬಾರಿ ಸ್ಮರಣೆ ಸಾಲದೆ

ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ|| ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ|| ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೆ ಸಜ್ಜನರ ಬಂಧೂ

ಹರ(ಡ)ಪನಹಳ್ಳಿ ಭೀಮವ್ವನವರ ರಚನೆ - ಅಂಕಿತ "ಭೀಮೇಶ ಕೃಷ್ಣ" ರಾಗ : ಪೂರ್ವಿಕಲ್ಯಾಣಿ ರೂಪಕ ತಾಳ ನೀನೆ ಸಜ್ಜನರ ಬಂಧೂ... ಕಾರುಣ್ಯ ಸಿಂಧೂ ಕರಿಮರಿ ಬಳಗ ಬಂದೊದಗಿದರೇನೂ ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿ ಎಂದರೆ ಆ ಕ್ಷಣದಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈತ ಲಿಂಗ ದೇವ ಶಿವನು

ರಾಗ : ದುರ್ಗ ತಿಶ್ರ ಏಕತಾಳ ಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು ಮಾತನಾಡೋ ಮಂಕು ಮನುಜ ಮನದ ಅಹಂಕಾರವನೇ ಜರಿದು.... ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ ಬೂದಿ ಮೈಯಲಿ ಧರಿಸಿದನೀತ ಭುವನ ಗಿರಿಯ ಪೊತ್ತನಾತ...
ದಾಸ ಸಾಹಿತ್ಯ ಪ್ರಕಾರ
ಬಗೆ

ಬೆಳಗು ಜಾವದಿ ಬಾರೋ ಹರಿಯೇ

ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣ ತೊಳೆದು ಜಲವ ಪಾನ ಮಾಡುವೆ ನಾ|| ನೀರ ಒಳಗೆ ನಿಂತುಕೊಂಬೆ, ಬೆನ್ನ ಭಾರ ಪೊತ್ತರೆ ನಗುವಳು ನಿನ್ನ ರಂಭೆ| ಮೋರೆ ತಗ್ಗಿಸದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯ ಕೊಂಬೆ|| ಬಲಿಯ ದಾನವ ಬೇಡಿದ್ಯಲ್ಲೋ, ಕ್ಷತ್ರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾತು ಮಾತಿಗೆ ಕೇಶವ ನಾರಾಯಣ

ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ - ಹೇ ಜಿಹ್ವೆ ||ಪಲ್ಲವಿ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆದು ಸದ್ಗತಿಯ ಹೊಂದದೆ ವ್ಯರ್ಥ ಮಾತುಗಳಾಡಲ್ಯಾಕೆ - ಹೇ ಜಿಹ್ವೆ ||ಅನುಪಲ್ಲವಿ|| ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣಹರವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ || ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು ಅವನಿಯೊಳ್ ಶ್ರೀರಾಮನೆಂಬೊ ಹಣ್ಣು || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ

ಬಾರಮ್ಮ.. ಶ್ರೀ ರಂಗಧಾಮನ ತಂದು ತೋರಮ್ಮ ವಾರಿಜಾಸನ ಸನಕಾದಿ ವಂದಿತ ಪಾದ ತೋರಿದ ಮಹಿಮ ಧೀರ ಉದ್ಧಾರನ.. || ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ ಚಂದದಿ ಕೊಳಲನ್ನೂದುವ ನಮ್ಮ ಕಂದ ಜಲಕ್ರೀಡೆಯನಾಡುವ ನಂದನಂದನ ಗೋವಿಂದನ ಕಾಣದೆ
ದಾಸ ಸಾಹಿತ್ಯ ಪ್ರಕಾರ