ಬಲಿಯ ಮನೆಗೆ ವಾಮನ ಬಂದಂತೆ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು ಸಲಹಲಿ ಶ್ರೀ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ ನಿಲ್ಲದಯ್ಯ

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ ತನು ನಿಲ್ಲದಯ್ಯ ದಾತನು ಎಣಿಸಯ್ಯ| ಹಣ ಪುಟ್ಟುವುದು ಸುಗುಣ ಪುಟ್ಟದಯ್ಯ ಗುಣನಿಧಿ ಹರಿಯ ನೀನೆಣಿಸಿ ಬಾಳಯ್ಯಾ|| ಜನರು ಬರುವರು ಸಜ್ಜನ ಬಾರರಯ್ಯ ಅನುಸರಿಸುತ ಜೀವನ ಪೊರೆಯಯ್ಯ|| ಭಾಗ್ಯನಿಧಿ ವಿಠಲನ ಆಜ್ಞೆ ಇದಯ್ಯ ಸುಜನರ ಸೇವಿಸಿ ಯೋಗ್ಯನೆಂದಿನಿಸಯ್ಯಾ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸ ಸಾಹಿತ್ಯದ ಮೇಲೊಂದು ಪಕ್ಷಿ ನೋಟ

ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ: http://chirb.it/f09a9L -ಹಂಸಾನಂದಿ

ನೀಲಲೋಹಿತ ಪಾಲಯಮಾಂ

ರಾಗ ಕಾಂಬೋಧಿ(ಬಿಲಾವಲ್ ) ಝಂಪೆತಾಳ (ಕಹರವಾ) ನೀಲಲೋಹಿತ ಪಾಲಯಮಾಂ , ನೀಲಲೋಹಿತ ||ಪ|| ಫಾಲನಯನ ಶುಂಡಾಲಚರ್ಮ ಸುದು- ಕೂಲ ಮೃಡ ಪಾಲಿಸು ಕರುಣದಿ ||ಅ.ಪ|| ನಂದಿವಾಹನ ನಮಿಪೆ ಖಳ , ವೃಂದ ಮೋಹನ ಅಂಧಕರಿಪು ಶಿಖಿಸ್ಯಂದನ , ಸನಕ ಸ-ನಂದನಾದಿ ಮುನಿವಂದಿತ ಪದಯುಗ ||೧|| ಸೋಮಶೇಖರ-ಗಿರಿಜಾ ಸು-ತಾಮ್ರಲೇಖರಾ- ಸ್ತೋಮವಿನುತ ಭವಭೀಮ ಭಯಂಕರ, ಕಾಮಾಹಿತ ಗುಣಧಾಮ ದಯಾನಿಧೇ ||೨|| ನಾಗಭೂಷಣ ವಿಮಲ ಸ-ದ್ರಾಗ ಪೋಷಣ ಭೋಗಿಶಯನ ಜಗನ್ನಾಥವಿಟ್ಠಲನ , ಯೋಗದಿ ಭಜಿಸುವ ಭಾಗತರೊಳಿಡು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಂಭೋ ಸುರಗಂಗಾಧರನೆ

ಕೃತಿಕಾರರು-ಜಗನ್ನಾಥದಾಸರು ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ) ಶಂಭೋ ಸುರಗಂಗಾಧರನೆ ಪಾಲಿ- ಸಂಬಾರಮಣ ಲಿಂಗ ||ಪ|| ನಂಬಿದವರಘ ಕಾದಂಬಿನಿಪವನ ಹೇ- ರಂಬಜನಕ ಕರುಣಾಂಬುಧಿ ಗುರುವರ ||ಅ.ಪ|| ಇಳಿದೇರ ಇಂದುಮುಖ ಈಪ್ಸಿತ ಫಲ ಸಲಿಸುವ ಘನತ್ರಿಶೂಲಿ ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ- ನಿಲಯ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ- ದಳ ಪುರಾಂತಕ ನಿಜ ಶರಣ ವ- ತ್ಸಲ ವೃಷಾರೋಹಣ ವಿಬುಧವರ ||೧|| ಮಾರಾರಿ ಮಹದೇವ ನಿನ್ನಯ ಪಾದ ವಾರಿಜ ದಳಯುಗ್ಮವ ಸಾರಿದೆ ಸತತ ಸರೋರುಹೇಕ್ಷಣನ ಹೃ- ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ ಆರುಮೊಗನಯ್ಯ ಅಮಿತಗುಣಗಣ ವಾರಿನಿಧಿ ವಿಘತಾಘ ವ್ಯಾಳಾ ಗಾರವಿತ್ತ ಪವಿತ್ರ ಸುಭಗ ಶ- ರೀರ ದುರಿತಾರಣ್ಯ ಪಾವಕ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ

(ಕೃತಿಕಾರರು-ಜಗನ್ನಾಥದಾಸರು ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್) ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ|| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧| ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨|| ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಪೆನಮ್ಮಾ ಮುದ್ದುಶಾರದೆ

( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ) ವಂದಿಪೆನಮ್ಮಾ ಮುದ್ದುಶಾರದೆ ಶರ- ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧|| ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮುನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨|| ಪಾತಕಿಗಳೊಡನಾಡಿ ನಾ ನಿನ್ನ ಪೂತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ- ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಂಬೋದರ ರಕ್ತಾಂಬರಧರ

(ರಾಗ - ಯಮನ್ (ಮಧ್ಯಮಾವತಿ) ಅಟತಾಳ ) ಲಂಬೋದರ ರಕ್ತಾಂಬರಧರ ||ಪ|| ಅಂಬರಾಧೀಶ್ವರ ಗೌರಿಕುಮಾರ ||ಅ ಪ|| ಸಿಂಧುರ ವದನಾರವಿಂದ ಸುಂದರ ವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂತ ಧರ ಸುಮೋಹಕ ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||೨|| ಜಗನ್ನಾಥವಿಠಲನ ಮಗನಾಗಿ ದ್ವಾಪರ ಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡು ಧನ್ಯನಾದೆ

ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ| ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ| ಗೆಜ್ಜೆ ಕಾಲ ಕಡಗವಿಟ್ಟು, ಮಜ್ಜಿಗೆ ಕಡೆಗೋಲ ಪಿಡಿದು ಹಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ|| ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ ಕಂಟಕ ಕಂಸಾದಿಗಳನೆ ದಂಟಿನಂದದಿ ಸೀಳಿದವನ|| ಏಸು ಜನ್ಮದ ಸುಕೃತವೊ ಕಮಲೇಶ ವಿಠಲರಾಯ ತನ್ನ ದಾಸರ ಅಭಿಲಾಷೆಯಿತ್ತು ಕೂಸಿನಂದದಿ ಪೋಷಿಸುವನ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೆ ನಿನ ಪದತೋಯಜಕೆರಗುವೆ

ಕಾಯೆ ನಿನ ಪದತೋಯಜಕೆರಗುವೆ |ಪ| ಮಾಯದೇವಿ ಹರಿಕಾಯನಿವಾಸೆ |ಅ ಪ| ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ ಕರ್ದಮಜಾಲಯೆ ಭದ್ರಶರೀರೆ|| ಇಂಗಡಲಾತ್ಮಜೆ ಅಂಗನಕುಲಮಣಿ ರಂಗನ ಪದಕಂಜಭೃಂಗೆ ಕರುಣದಿ|| ಪ್ರಾಣೇಶವಿಠಲನ ಮಾನಿನಿ ಎನ್ನಯ ಹೀನತೆಯೆಣಿಸದೆ ಪೋಣಿಸಿಮತಿಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು