ವೇಣಿ ಮಾಧವನ ತೋರಿಸೆ

ವೇಣಿ ಮಾಧವನ ತೋರಿಸೆ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ|| ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ|| ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ ಮಂದಗಮನೆ ಎನ್ನ ಮುಂದಕೆ ಕರೆಯೆ ||೧|| ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು ಕರುಣದಿಂದೆನ್ನ ಪೊರೆಯೆ ಸ್ಮರಣೆ ಮಾತ್ರದಿ ಭವತಾಪವ ಹರಿಸುವ ಸ್ಮರನ ಪಿತ ಮುರಹರನ ಕರುಣದಿ ||೨|| ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ ಕುಜನ ಸಂಗವನು ಕೀಳೆ ನಿಜಪದವಿಯನೀವ ಹಯವದನನ ಪಾದ ವಾರಿಜ ತೋರಿಸೆ ಮದಗಜಗಮನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು