ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ

ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ

ಬಾರಮ್ಮ.. ಶ್ರೀ ರಂಗಧಾಮನ ತಂದು ತೋರಮ್ಮ ವಾರಿಜಾಸನ ಸನಕಾದಿ ವಂದಿತ ಪಾದ ತೋರಿದ ಮಹಿಮ ಧೀರ ಉದ್ಧಾರನ.. || ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ ಚಂದದಿ ಕೊಳಲನ್ನೂದುವ ನಮ್ಮ ಕಂದ ಜಲಕ್ರೀಡೆಯನಾಡುವ ನಂದನಂದನ ಗೋವಿಂದನ ಕಾಣದೆ ಒಂದು ನಿಮಿಷ ಯುಗವಾಗಿ ತೋರುತಲಿದೆ... || ಉಡುವಸೀರೆ ಸೆಳೆದೋಡುವ ದೊಡ್ಡ ಕಡಹದ ಮರವ ತಾನೇರುವ ಕೊಡಲೊಲ್ಲದೆ ಬಲು ಕಾಡುವ ಲಜ್ಜೆಗೆಡಿಸಿ ಮಾನಿನಿಯರ ಕೂಡುವ ತಡವ್ಯಾತಕೆ ಸಖಿ ತವಕದಿಂದಲಿ ಪೋಗಿ ಒಡೆಯನ ಕರೆತಾರೆ ಅಡಿಗೆರಗುವೆನಮ್ಮ...|| ನೀಲವರ್ಣ ನಿಜರೂಪನ ಶ್ರೀ ಲೋಲ ಹೆಳವನಕಟ್ಟೆ ವಾಸನ ಲಾಲಿ ಹಾಡು ರಂಗೇಶನ ಮೂಲೋಕಕ್ಕೊಡೆಯ ಪಾಲಿಸೆನ್ನನ ಆಲಸ್ಯವ್ಯಾತಕೆ ವಿನಯನ ಕರತಾರೆ ಜಾಣೆ ನಿನಗೆ ಕಂಠ ಮಾಲೆ ಹಾಕುವೆನಮ್ಮ...||
ದಾಸ ಸಾಹಿತ್ಯ ಪ್ರಕಾರ