ಬೆಳಗು ಜಾವದಿ ಬಾರೋ ಹರಿಯೇ

ಬೆಳಗು ಜಾವದಿ ಬಾರೋ ಹರಿಯೇ

ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣ ತೊಳೆದು ಜಲವ ಪಾನ ಮಾಡುವೆ ನಾ|| ನೀರ ಒಳಗೆ ನಿಂತುಕೊಂಬೆ, ಬೆನ್ನ ಭಾರ ಪೊತ್ತರೆ ನಗುವಳು ನಿನ್ನ ರಂಭೆ| ಮೋರೆ ತಗ್ಗಿಸದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯ ಕೊಂಬೆ|| ಬಲಿಯ ದಾನವ ಬೇಡಿದ್ಯಲ್ಲೋ, ಕ್ಷತ್ರಿ ಕುಲವ ಸವರೆ ಕೊಡಲಿಯ ಪಿಡಿದ್ಯಲ್ಲೋ| ಬಲವಂತ ನಿನಗಿದಿರಲ್ಲೋ, ನಿನ್ನ ಲಲನೆಯ ತಂದು ರಾಜ್ಯವನಾಳಿದ್ಯಲ್ಲೋ|| ಗೋಕುಲದಳು ಇದ್ದೀಯಲ್ಲೋ, ಲೋಕ ಪಾಕುಮಾಡಲು ಬುದ್ಧ ರೂಪನಾದ್ಯಲ್ಲೋ| ಯಾಕೆ ಹಯವನೇರಿದ್ಯಲ್ಲೋ ನಮ್ಮ ಸಾಕುವ ಹಯವದನ ನೀನೆ ಬಂದ್ಯಲ್ಲೋ||
ದಾಸ ಸಾಹಿತ್ಯ ಪ್ರಕಾರ
ಬರೆದವರು