ನೋಡಿ ಮರುಳಾಗದಿರು ಪರಸತಿಯರ

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ || ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ || ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ ಆತುರದಿ ಶಚಿಗೆ ಮನಸೋತು ಭ್ರಮಿಸಿ ಅತಿ ಬೇಗ ಚಲಿಸಂದು ಬೆಸಸಲಾ ಮುನಿಯಿಂದ ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು || ೧ || ಸುರಪತಿಯು ಗೌತಮನ ಸತಿಗಾಗಿ ಕಪಟದಿಂ ಧರೆಗೆ ಮಾಯವೇಷ ಧರಿಸಿ ಬಂದು ಪರಮ ಮುನಿಶಾಪದಿಂ ಅಂಗದೊಳು ಸಾ ವಿರ ಕಣ್ಣಾಗಿ ಇದ್ದ ಪರಿಯ ನೀನರಿತು || ೨ || ಸ್ಮರನ ಶರತಾಪವನು ಪರಿಹರಿಸಲರಿಯದಲೆ ದುರುಳ ಕೀಚಕನು ದ್ರೌಪದಿಯ ಕೆಣಕಿ ಮರುತಸುತ ಭೀಮನಿಂದಿರುಳೊಳಗೆ ಹತನಾದ ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ || ೩ || ಹರನ ವರವನು ಪಡೆದು ಶರಧಿಮಧ್ಯದೊಳಿದ್ದು ದುರುಳ ದಶಶಿರನು ಜಾನಕಿಯನೊಯ್ಯೆ ಧುರದೊಳಗೆ ರಘುವರನ ಶರದಿಂದ ಈರೈದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || 1 || ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || 2 || ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ ಕುಸುಮ ಗಂಧಗಳೆರಡು ಘ್ರಾಣದೊಳಗೊ ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ || 3 ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನು ನಿನ್ನದು ಜೀವನ ನಿನ್ನದು

ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ || ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು ನವಮೋಹನಾಂಗಿಯರ ರೂಪವ ಕಣ್ಣಿಂದ ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ || ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ ಬಿಡದೆ ಲೇಪಿಸಿಕೊಂಬುವುದು ನಿನ್ನದು ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ || ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ ಕಾಯ ಪಂಚೇದ್ರಿಯದ ಗತಿ ನಿನ್ನದು ಕಾಯಜಪಿತ ಕಾಗಿನೆಲೆಯಾದಿ ಕೇಶವ ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂದು ಕೊಂಡಾಡಿ ಸ್ತುತಿಸಲೋ ದೇವ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ || ಪಲ್ಲವಿ|| ನಾನೇನು ಬಲ್ಲೆ ನಿಮ್ಮ ಮಹಿಮೆಗಳ ಮಾಧವ || ಅನುಪಲ್ಲವಿ || ಹರಿ ಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳ ಪಾಪಿಯು ನಾನು ಪರಂಜ್ಯೋತಿಯು ನೀನು ತಿರುಕನು ನಾನು || ೧ || ವಾರಿಧಿಶಯನನಾದ ಕಾರುಣ್ಯಪತಿ ನೀನು ಘೋರದಿಂದಿಹ ಕಾಮಿ ಕ್ರೋಧಿಯು ನಾನು ಈರೇಳು ಭುವನದೊಳು ಇರುವ ಮೂರುತಿ ನೀನು ದೂರಿ ನಿಮ್ಮನು ಬೈವ ದುಷ್ಟನು ನಾನು || ೨ || ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅನುಗುಣದ ಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನು ತನು ನಿತ್ಯವಲ್ಲದ ಬೊಂಬೆಯು ನಾನು || ೩ || ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕಿಲ್ಲದ ಪ್ರಪಂಚಿಗನು ನಾನು ಅಂಬರೀಷನಿಗೆ ಒಲಿದ ಅಕ್ರೂರ ಸಖ ನೀನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವ ಹನುಮ ಶೆಟ್ಟಿ

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ಕಾವೋದು ಭಾವಿ ಪರಮೇಷ್ಠಿ ಪಾವನ ಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ವಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸು ವಾನರ ಕುಲ ನಾಯಕ ಜಾನಕಿ ಶೋಕ ಕಾನನ ತೃಣ ಪಾವಕ ಹೀನ ಕೌರವ ನಾಶಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ|| ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ|| ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತಾಯಿ ನಿನ್ನ ತಾಯ ತೋರೋ ಪುರಂದರ ವಿಠಲ!
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಾಲಿ ಶ್ರೀ ಹಯವದನ

ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ|| ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ| ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ ಪುತ್ರನ ಎತ್ತಿಕೊ ನಂದಗೋಪಾಲ|| ಮನೆಯೊಳಗೆ ಇರನೀತ ಬಹು ರಚ್ಚೆವಂತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮಸ್ತೇ ವಿಮಲ ಕೋಮಲೆ ರಮಾದೇವಿ

ನಮಸ್ತೇ ವಿಮಲ ಕೋಮಲೆ ರಮಾದೇವಿ ನಮಸ್ತೇ ನಮಸ್ತೇ|| ತರುಣಿ ಶಿರೋಮಣಿ ನಿನ್ನ ಶೀಲಸೌಂದರ್ಯವನು ಧರೆಯೊಳಗೆ ವರ್ಣಿಸುವ ಕವಿಯದಾವ| ಸ್ವರಮಣನೆಂದೆನಿಪ ರಮಣನುರದೊಳೆಂದೆಂದು ಅರಮನೆಯ ಮಾಡಿ ಮೆರೆವ ಭಾಪುರೆ ದೇವಿ|| ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆನೆವೆನನುದಿನ

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||ಪಲ್ಲವಿ|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||ಅನುಪಲ್ಲವಿ|| ದೇವಕೀಜಠರೋದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ - ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ - ಚಿದಾನಂದನ
ದಾಸ ಸಾಹಿತ್ಯ ಪ್ರಕಾರ
ಬರೆದವರು